ಅಮೆರಿಕಾ ಕ್ಷಿಪಣಿ ಬಳಕೆ ಮಾಡಿ ಪಾಕಿಸ್ತಾನದಿಂದ ಭಾರತೀಯ ಸೈನಿಕರ ಮೇಲೆ ದಾಳಿ!
ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತೀಯ ಸೇನೆ ಮೇಲೆ ದಾಳಿ ಮಾಡಲು ಪಾಕಿಸ್ತಾನ ಅಮೆರಿಕಾದ ಕ್ಷಿಪಣಿಗಳನ್ನು ಬಳಕೆ ಮಾಡುತ್ತಿದೆ ಎಂಬಂತಹ ಮಾಹಿತಿ ರಕ್ಷಣಾ ಸಚಿವಾಲಯಕ್ಕೆ ತಿಳಿದುಬಂದಿದೆ.

ಜಮ್ಮು -ಕಾಶ್ಮೀರ: ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತೀಯ ಸೇನೆ ಮೇಲೆ ದಾಳಿ ಮಾಡಲು ಪಾಕಿಸ್ತಾನ ಅಮೆರಿಕಾದ ಕ್ಷಿಪಣಿಗಳನ್ನು ಬಳಕೆ ಮಾಡುತ್ತಿದೆ ಎಂಬಂತಹ ಮಾಹಿತಿ ರಕ್ಷಣಾ ಸಚಿವಾಲಯಕ್ಕೆ ತಿಳಿದುಬಂದಿದೆ.
ರಜೌರಿ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಕಳೆದ ವಾರ ಭಾರತೀಯ ಸೈನಿಕರ ಮೇಲೆ ಉಗ್ರರು ನಡೆಸಿದ ಶೆಲ್ ದಾಳಿ ವೇಳೆ ಅಮೆರಿಕಾ ತಯಾರಿಸಿದ ಕ್ಷಿಪಣಿ ನಿರ್ದೇಶಿತ ವಿರೋಧಿ ಟ್ಯಾಂಕ್ ಬಳಸಿರುವುದು ಕಂಡುಬಂದಿದೆ.
ಪಾಕಿಸ್ತಾನ 120 ಎಂಎಂ ಹಾಗೂ ಕ್ಷಿಪಣಿ ನಿರ್ದೇಶಿತ ವಿರೋಧಿ ಟ್ಯಾಂಕ್ ಬಳಕೆ ಮಾಡಿದೆ ಎಂದು ರಕ್ಷಣಾ ಮೂಲಗಳು ಸ್ಪಷ್ಪಪಡಿಸಿವೆ. ಈ ಸಂಬಂಧ ಅಮೆರಿಕಾದೊಂದಿಗೆ ಮಾತುಕತೆ ನಡೆಸುವುದಾಗಿಯೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕಾ ಭಾರತದ ದೊಡ್ಡ ರಕ್ಷಣಾ ಪಾಲುದಾರರಾಗಿದ್ದು, ರಕ್ಷಣೆ ಮತ್ತು ಭದ್ರತೆ ಸಂಬಂಧ ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಏರ್ಪಟ್ಟಿವೆ. ಕಳೆದ ವಾರ ನಡೆದ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಾರತ ಸ್ಪಷ್ಪಪಡಿಸಿದೆ.
ಜಮ್ಮು- ಕಾಶ್ಮೀರದ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕಿಸ್ತಾನ ತನ್ನ ಸೇನೆಯನ್ನು ನಿಯೋಜಿಸಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


