ದೇಶ

ಮೊಗಲ್ ದೊರೆ ಔರಂಗಜೇಬ್ ಒಬ್ಬ ಭಯೋತ್ಪಾದಕ: ಬಿಜೆಪಿ ಸಂಸದ ಮಹೇಶ್ ಗಿರಿ

ಮೊಗಲ್ ದೊರೆ ಔರಂಗಜೇಬ್ ಒಬ್ಬ ಭಯೋತ್ಪಾದಕನಾಗಿದ್ದ ಆದರೆ ಆತನ ಸಹೋದರ ದಾರಾ ಶಿಕೋ ಒಬ್ಬ ಪಂಡಿತನಾಗಿದ್ದ ಎಂದು ಬಿಜೆಪಿ ಸಂಸದ ಮಹೇಶ್ ಗಿರಿ...

ಮೊಗಲ್ ದೊರೆ ಔರಂಗಜೇಬ್ ಒಬ್ಬ ಭಯೋತ್ಪಾದಕ: ಬಿಜೆಪಿ ಸಂಸದ ಮಹೇಶ್ ಗಿರಿ
ಮಹೇಶ್ ಗಿರಿ
Published On :
ನವದೆಹಲಿ: ಮೊಗಲ್ ದೊರೆ ಔರಂಗಜೇಬ್ ಒಬ್ಬ ಭಯೋತ್ಪಾದಕನಾಗಿದ್ದ ಆದರೆ ಆತನ ಸಹೋದರ ದಾರಾ ಶಿಕೋ ಒಬ್ಬ ಪಂಡಿತನಾಗಿದ್ದ ಎಂದು ಬಿಜೆಪಿ ಸಂಸದ ಮಹೇಶ್ ಗಿರಿ ಹೇಳಿದ್ದಾರೆ. 
ಐಜಿಎನ್ಸಿಎಯಲ್ಲಿ ನಡೆದ ಮೊಗಲ್ ದೊರೆ ಔರಂಗಜೇಬ್ ಮತ್ತು ದಾರಾ ಶಿಕೋ-ಇಬ್ಬರು ಸಹೋದರರ ಜೀವನಗಾಥೆ ಕುರಿತ ವಿಚಾರ ಸಂಕೀರ್ಣವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಮಹೇಶ್ ಗಿರಿ ಅವರು ಔರಂಗಜೇಬ್ ನ ಸಹೋದರ ದಾರಾ ಶಿಕೋ ಹಿಂದೂ-ಮುಸ್ಲಿಂ ಧರ್ಮಗಳ ಉನ್ನತ ಮೌಲ್ಯಗಳನ್ನು ಒಂದುಗೊಳಿಸುವ ಆಶಯ ಹೊಂದಿದ್ದ ಮತ್ತು ತನ್ನ ಬದುಕಿನ ಬಗ್ಗೆ ಮಹತ್ತರ ಜಿಜ್ಞಾನೆ, ಜಾಗೃತಿ ಹೊಂದ ಬಯಸಿದ್ದ ಎಂದು ಹೇಳಿದ್ದಾರೆ. 
ಔರಂಗಜೇಬ್ ಇಂದಿನ ದೃಷ್ಟಿಕೋನದಲ್ಲಿ ನೋಡಿದರೆ ಒಬ್ಬ ಭಯೋತ್ಪಾದಕ, ಆತನ ದುಷ್ಕೃತ್ಯಗಳಿಗೆ ಸಿಗಬೇಕಾಗಿದ್ದ ಶಿಕ್ಷೆ ಆತನಿಗೆ ಸಿಗಲೇ ಇಲ್ಲ. ಈಗ ಆತನ ಹೆಸರಿನ ಮಾರ್ಗದ ಹೆಸರನ್ನು ಬದಲಾಯಿಸಲಾಗಿರುವುದು ಸಮಾಧಾನದ ಸಂಗತಿ ಎಂದು ಸುದ್ದಿಗಾರರಿಗೆ ತಿಳಿಸಿದರು. 
ದೆಹಲಿಯ ಲುಟೇನ್ಸ್ ಪ್ರದೇಶದಲ್ಲಿನ ಔರಂಗಜೇಬ್ ಮಾರ್ಗದ ಹೆಸರನ್ನು 2015ರಲ್ಲಿ ಬದಲಾಯಿಸಿ ಅದಕ್ಕೆ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಾಗಿತ್ತು. ಸ್ವತಃ ಸಂಸದ ಗಿರಿ ಅವರೇ ಈ ಮಾರ್ಗ ಪುನರ್ ನಾಮಕರಣ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಅದು ಕಾರ್ಯಗತವಾಗುವಂತೆ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.