ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆ: ಏಕಸದಸ್ಯ ಪೀಠದಿಂದ ಜೇಟ್ಲಿಯ ಪಾಟಿಸವಾಲು-ದೆಹಲಿ ಕೋರ್ಟ್
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅರುಣ್ ಜೇಟ್ಲಿ ಅವರ ಪಾಟಿಸವಾಲನ್ನು ಜಂಟಿ ರಿಜಿಸ್ಟಾರ್ ನಿಂದ ಏಕಸದಸ್ಯ

Published On :
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅರುಣ್ ಜೇಟ್ಲಿ ಅವರ ಪಾಟಿಸವಾಲನ್ನು ಜಂಟಿ ರಿಜಿಸ್ಟಾರ್ ನಿಂದ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾ.ಮನಮೋಹನ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಹಣಾಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಏಕಸದಸ್ಯ ಪೀಠದೆದುರು ಪಾಟಿಸವಾಲಿಗೆ ಒಳಪಡಬೇಕು, ಜಂಟಿ ರಿಜಿಸ್ಟಾರ್ ಎದುರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಫೆ.12 ರೊಳಗೆ ಜೇಟ್ಲಿ ಪಾಟಿಸವಾಲನ್ನು ಪೂರ್ಣಗೊಳಿಸುವಂತೆ ಕೇಜ್ರಿವಾಲ್ ಪರ ವಕೀಲರಿಗೆ ನೀಡಲಾಗಿದ್ದ ಈ ಹಿಂದಿನ ಆದೇಶವೂ ಅನ್ವಯವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಕೇಂದ್ರ ಸಚಿವರಿಗೆ ಕೇಳಬೇಕಿರುವ ಪ್ರಶ್ನೆಗಳ ಪ್ರಸ್ತುತತೆ, ಪಾಟಿಸವಾಲು ಮುಕ್ತಾಯಗೊಳಿಸಬೇಕಿರುವ ಅವಧಿಯನ್ನೂ ಸಹ ಏಕಸದಸ್ಯ ಪೀಠ ತೀರ್ಮಾನಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arun Jaitleyಅರುಣ್ ಜೇಟ್ಲಿDelhi High Courtಕೇಜ್ರಿವಾಲ್ಮಾನನಷ್ಟ ಮೊಕದ್ದಮೆದೆಹಲಿ ಕೋರ್ಟ್cross-examineಪಾಟಿಸವಾಲು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


