ಮೋದಿಕೇರ್ -ಎರಡು ತಿಂಗಳೊಳಗೆ ನೀತಿ ಆಯೋಗದಿಂದ ನೀಲಿನಕ್ಷೆ ತಯಾರಿ
ಎರಡು ತಿಂಗಳೊಳಗೆ ಮೋದಿಕೇರ್ ನೀಲಿನಕ್ಷೆ ರೂಪಿಸುವತ್ತ ನೀತಿ ಆಯೋಗ ಮುಂದಾಗಿದೆ. ಎರಡು ತಿಂಗಳೊಳಗೆ ವರದಿ ಸಲ್ಲಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿ: ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಬಜೆಟ್ ನಲ್ಲಿ ಕಡಿಮೆ ಪ್ರಮಾಣದ ಹಣ ಮೀಸಲಿರಿಸಲಾಗಿದೆ ಎಂಬ ತೀವ್ರ ಟೀಕೆಗಳ ಬೆನ್ನಲ್ಲೇ ಎರಡು ತಿಂಗಳೊಳಗೆ ಮೋದಿಕೇರ್ ನೀಲಿನಕ್ಷೆ ರೂಪಿಸುವತ್ತ ನೀತಿ ಆಯೋಗ ಮುಂದಾಗಿದೆ.
ವಿಮಾ ನೀಲಿನಕ್ಷೆ ರೂಪಿಸುವಲ್ಲಿ ನೀತಿ ಆಯೋಗ ಕಾರ್ಯೋನ್ಮುಖವಾಗಿದೆ . ಎರಡು ತಿಂಗಳೊಳಗೆ ವರದಿ ಸಲ್ಲಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೋಜನೆಯ ಪೂರ್ಣ ವೆಚ್ಚ, ನಿಧಿಯ ಮಾದರಿ, ಒಟ್ಟಾರೇ, ಮಾನವ ಸಂಪನ್ಮೂಲ , ದೇಶದಲ್ಲಿರುವ ಆರೋಗ್ಯ ಸಂಬಂಧಿತ ಮೂಲಕೌರ್ಯಸೌಕರ್ಯ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ರಾಜ್ಯಗಳನ್ನೊಳಗೊಂಡ ನೀಲಿನಕ್ಷೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಗೆ ಸಂಬಂಧಿಸಿದ ಪ್ರತ್ಯೇಕ ವರದಿಯನ್ನು ಆಯೋಗ ನೀಡಲಿದೆ.ಇದರಿಂದ ಅಲ್ಪ ಅವಧಿಯಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
2018-19ರ ಅವಧಿಯಲ್ಲಿ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಗಾಗಿ ಸರ್ಕಾರ 2 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ.ಇದಲ್ಲದೇ, ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆದಾಗ್ಯೂ,10 ಕೋಟಿ ಕುಟುಂಬಗಳ 50 ಕೋಟಿ
ಫಲಾನುಭವಿಗಳಿಗೆ ಯೋಜನಾ ಅನುಷ್ಠಾನಕ್ಕಾಗಿ 10 ಸಾವಿರದಿಂದ 12 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ ಎಂದು ಅಂದಾಜು ವೆಚ್ಚ ಮಾಡಲಾಗಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ಯೋಜನೆಗಳನ್ನೊಳಗೊಂಡಂತೆ ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ನೀಲಿನಕ್ಷೆಯನ್ನೂ ಸಹ ಈ ವರದಿ ನೀಡಲಿದೆ. ವರದಿ ಬಂದ ನಂತರ ಆರೋಗ್ಯ ಸಂಬಂಧಿತ ಮೂಲಸೌಕರ್ಯಗಳ ಕೊರತೆ ಇರುವ ಹಿಂದುಳಿದಿರುವ
ರಾಜ್ಯಗಳಲ್ಲಿ ನೀತಿ ಆಯೋಗ ಜೊತೆಯಾಗಿ ಕಾರ್ಯನಿರ್ವಹಿಸಲಿದೆ. ನಂತರ ಇದೇ ಮಾದರಿಯನ್ನು ಇತರ ರಾಜ್ಯಗಳಿಗೂ ಅನ್ವಯಿಸಲಾಗುತ್ತದೆ ಎಂಬುದು ಉನ್ನತ ಮಾಹಿತಿಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


