ದೇಶ

ಶ್ರೀನಗರ ಆಸ್ಪತ್ರೆ ಮೇಲೆ ದಾಳಿ ಮಾಡಿ ಉಗ್ರ ಪರಾರಿ ಪ್ರಕರಣ: ಐವರು ಶಂಕಿತರ ಬಂಧನ

ಶ್ರೀನಗರದ ಶ್ರೀಮಹಾರಾಜ್ ಹರಿ ಸಿಂಗ್ ಆಸ್ಪತ್ರೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಐದು ಮಂದಿ ಶಂಕಿತರನ್ನು ಗುರುವಾರ ಬಂಧಿಸಿದ್ದಾರೆ.

ಶ್ರೀನಗರ ಆಸ್ಪತ್ರೆ ಮೇಲೆ ದಾಳಿ ಮಾಡಿ ಉಗ್ರ ಪರಾರಿ ಪ್ರಕರಣ: ಐವರು ಶಂಕಿತರ ಬಂಧನ
ಪರಾರಿಯಾಗಿರುವ ಉಗ್ರ ನವೀದ್ ಜಟ್ಟ್
Published On :
ಶ್ರೀನಗರ: ಶ್ರೀನಗರದ ಶ್ರೀಮಹಾರಾಜ್ ಹರಿ ಸಿಂಗ್ ಆಸ್ಪತ್ರೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಐದು ಮಂದಿ ಶಂಕಿತರನ್ನು ಗುರುವಾರ ಬಂಧಿಸಿದ್ದಾರೆ.
ಶ್ರೀನಗರದ ಶ್ರೀಮಹಾರಾಜ್ ಹರಿ ಸಿಂಗ್ ಆಸ್ಪತ್ರೆ ಮೇಲೆ ಮಂಗಳವಾರ ದಾಳಿ ಮಾಡಿದ್ದ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಗರೆದಿದ್ದರು. ಈ ವೇಳೆ ತಪಾಸಣೆಗಾಗಿ ಪೊಲೀಸರೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದ ಲಷ್ಕರ್ ಉಗ್ರ  ಸಂಘಟನೆಯ ಉಗ್ರ ನವೀದ್ ಜಟ್ಟ್ ಪರಾರಿಯಾಗಿದ್ದ. ಅಂತೆಯೇ ಈ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಈ ಘಟನೆ ಸಂಬಂಧ ತುರ್ತು ಕಾರ್ಯಾಚರಣೆ ನಡೆಸಿರುವ ಕಾಶ್ಮೀರ ಪೊಲೀಸರು ಕೇವಲ 48  ಗಂಟೆಗಳಲ್ಲಿ 5 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶ್ರೀನಗರ ಪೊಲೀಸರು, ಘಟನೆಗೆ ಬಳಕೆ ಮಾಡಲಾಗಿದ್ದ ಮೊಟಾರ್ ಬೈಕ್ ಮತ್ತು ಕಾರನ್ನು ಟ್ರಾಕ್ ಮಾಡಲಾಗಿದ್ದು, ಪೊಲೀಸ್ ಬಂಧನದಲ್ಲಿದ್ದ ಉಗ್ರ ನವೀದ್ ಜಟ್ಟ್ ನನ್ನು ಬಿಡುಗಡೆ  ಮಾಡುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಹೆಡ್ ಕಾನ್ಸ್ ಟೇಬಲ್  ಮುಷ್ತಾಕ್ ಅಹ್ಮದ್ ಹಾಗೂ ಪೇದೆ ಬಾಬರ್ ಅಹ್ಮಗ್ ಖಾನ್ ಎಂಬ ಇಬ್ಬರು ಪೊಲೀಸರು ಮೃತರಾಗಿದ್ದರು, ಈ ಸಂಬಂಧ ಇದೀಗ ಐದು  ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇನ್ನು ಈ ಹಿಂದೆ ಪರಾರಿಯಾಗಿರುವ ಲಷ್ಕರ್ ಉಗ್ರ ನವೀದ್ ಜಟ್ಟ್ ನನ್ನು 2014ರಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಬಂಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.