ಕುಂಭ ಮೇಳದೊಳಗೆ ಶೇ.80ರಷ್ಟು ಗಂಗಾ ನದಿ ಸ್ವಚ್ಛ: ನಿತಿನ್ ಗಡ್ಕರಿ
ಮುಂಬರುವ ಕುಂಭಮೇಳ ಕಾರ್ಯಕ್ರಮದೊಳಗೆ ಗಂಗಾನದಿಯನ್ನು ಶೇ.80ರಷ್ಟು ಶುದ್ಧೀಕರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Published On :
ನವದೆಹಲಿ: ಮುಂಬರುವ ಕುಂಭಮೇಳ ಕಾರ್ಯಕ್ರಮದೊಳಗೆ ಗಂಗಾನದಿಯನ್ನು ಶೇ.80ರಷ್ಟು ಶುದ್ಧೀಕರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ನಿತಿನ್ ಗಡ್ಕರಿ ಅವರು, ನಮಾಮಿ ಗಂಗೆ ಯೋಜನೆಯಡಿಯಲ್ಲಿ ಜಾರಿ ಮಾಡಲಾಗಿರುವ ವಿವಿಧ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ನದಿ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ ಸುಮಾರು 20 ಸಾವಿರ ಕೋಟಿ ರು.ಗಳನ್ನು ವ್ಯಯಿಸಿದೆ. ಪ್ರಮುಖವಾಗಿ ಮುಂಬರುವ ಕುಂಭಮೇಳದ ಒಳಗೆ ಗಂಗಾನದಿಯ ಶೇ.80ರಷ್ಚನ್ನು ಸ್ವಚ್ಛಗೊಳಿಸುವ ವಿಶ್ವಾಸವಿದೆ. ನಮಾಮಿ ಗಂಗೆ ಯೋಜನೆಯಡಿಯಲ್ಲಿ ಒಟ್ಟು 189 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಪೈಕಿ ಈಗಾಗಲೇ 47 ಯೋಜನೆಗಳು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಅಂತೆಯೇ ಕುಂಭಮೇಳದೊ ಹೊತ್ತಿಗೆ ಶೇ.80ರಷ್ಟು ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಲ್ಲದೇ ಒಳಚರಂಡಿ ನೀರು ನದಿಗೆ ಸೇರುವುದನ್ನು ತಡೆಯುವುದಲ್ಲದೇ ಒಳಚರಂಡಿ ನೀರು ಶುದ್ಧೀಕರಿಸುವ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ ಕುಂಭಮೇಳಕ್ಕಾಗಿ ಐದು ಪ್ರಮುಖ ಪ್ರದೇಶಗಳಲ್ಲಿ ನದಿ ಬಂದರುಗಳನ್ನು ನಿರ್ಮಿಸುವ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ರಸ್ತೆ ಮತ್ತು ನೀರಿನ ವ್ಯವ್ಯಸ್ಥೆಯಷ್ಟೇ ಅಲ್ಲದೇ ಸಂಪರ್ಕ ವ್ಯವಸ್ಥೆಯನ್ನೂ ಕಲ್ಪಿಸುವ ಉದ್ದೇಶವಿದೆ ಎಂದು ಗಡ್ಕರಿ ಹೇಳಿದರು.
ಅಲಹಾಬಾದ್ ನ ಸಂಗಮದಲ್ಲಿ ನಡೆಯುವ ಕುಂಭಮೇಳ ಆತೀದೊಡ್ಡ ಧಾರ್ಮಿಕ ಕೈಂಕರ್ಯಗಳಲ್ಲಿ ಒಂದಾಗಿದ್ದು, ಕುಂಭಮೇಳದ ಸಂದರ್ಭದಲ್ಲಿ ಸುಮಾರು 100 ಮಿಲಿಯನ್ ಗೂ ಅಧಿಕ ಜನರು ಪವಿತ್ರ ಗಂಗೆಯಲ್ಲಿ ಮಿಂದೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiನಿತಿನ್ ಗಡ್ಕರಿModi governmentಮೋದಿ ಸರ್ಕಾರNithin gadkariKumbh MelaCean Ganga Projectಕ್ಲೀನ್ ಗಂಗಾ ಯೋಜನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


