ಭಾರತೀಯ ರಾಜಕುಮಾರಿಗೆ ಇಂಗ್ಲೆಂಡಿನ ರಾಯಲ್ ಮೇಲ್ ಅಂಚೆಚೀಟಿ ಗೌರವ
ಭಾರತೀಯ ರಾಣಿ ಸೋಫಿಯಾ ಅಲೆಗ್ಸಾಂಡ್ರಾ ದುಲೀಪ್ ಸಿಂಗ್ (ಆಗಸ್ಟ್ 8 1876-ಆಗಸ್ಟ್ 22 1948) ಚಿತ್ರವಿರುವ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ಬ್ರಿಟನ್ ನ ರಾಯಲ್ ಮೇಲ್ ...

Published On :
ನವದೆಹಲಿ: ಭಾರತೀಯ ರಾಣಿ ಸೋಫಿಯಾ ಅಲೆಗ್ಸಾಂಡ್ರಾ ದುಲೀಪ್ ಸಿಂಗ್ (ಆಗಸ್ಟ್ 8 1876-ಆಗಸ್ಟ್ 22 1948) ಚಿತ್ರವಿರುವ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ಬ್ರಿಟನ್ ನ ರಾಯಲ್ ಮೇಲ್ ಗೌರವ ಸಲ್ಲಿಸಿದೆ.
19 ನೇ ಶತಮಾನದ ಅಂತ್ಯ ಮತ್ತು 20 ನೇ ಶತಮಾನದ ಆರಂಭದಲ್ಲಿ ಮಹಿಳಾ ಸಂಘಟನೆಗಳ ಸದಸ್ಯರಾಗಿದ್ದ ಸಫ್ರಾಗೆಟ್ಗಳು ಮಹಿಳೆಯರ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಮಹಾರಾಜ ದುಲೀಪ್ ಸಿಂಗ್ ಪುತ್ರಿಯಾದ ಸೋಫಿಯಾ ಸಹ ಪಾಲ್ಗೊಂಡಿದ್ದು ಇದೀಗ ವಿಶೇಷ ಅಂಚೆಚೀಟಿ ಗೌರವಕ್ಕೆ ಭಾಜನರಾಗಿದ್ದಾರೆ.
ಈ ಅಂಚೆಚೀಟಿಯು ರಾಜಕುಮಾರಿ ಸೋಫಿಯಾ ಏಪ್ರಿಲ್ 1913 ರಲ್ಲಿ ಡಬ್ಲ್ಯು ಎಸ್ ಪಿಯು ವೃತ್ತಪತ್ರಿಕೆಯನ್ನು ಮಾರಾಟ ಮಾಡುತ್ತಿರುವ ಚಿತ್ರವನ್ನು ಹೊಂದಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಬ್ರಿಟನ್ ನಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸಿದ ದಕ್ಷಿಣ ಏಷ್ಯಾದ ಮಹಿಳೆಯರಲ್ಲಿ ರಾಜಕುಮಾರಿಯ ಸೋಫಿಯಾ ಸಹ ಒಬ್ಬರು. ಮಹಿಳಾ ತೆರಿಗೆ ವಿರೋಧಿ ಲೀಗ್ ನಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟ ಸೇರಿದಂತೆ ಇತರ ಮಹಿಳಾ ಹೋರಾಟ ಸಮೂಹದಲ್ಲಿ ಸೋಫಿಯಾ ಭಾಗವಹಿಸಿದರು.
ಆದಾಗ್ಯೂ, ಬಿಬಿಸಿ ಪತ್ರಕರ್ತೆ ಅನಿತಾ ಆನಂದ್ 'ಏಷ್ಯಾದ ಮಹಿಳೆ" ಹೆಸರಿನ ವರದಿಯಲ್ಲಿ ಸೋಫಿಯಾ ಜೀವನವನ್ನು ವಿವರಿಸುವವರೆಗೆ ಜಗತ್ತಿನ ಬಹುತೇಕರಿಗೆ ರಾಜಕುಮಾರಿಯ ನೇನಪೇ ಇರಲಿಲ್ಲ.
ಬ್ರಿಟೀಷ್ ಆಡಳಿತದಲ್ಲಿ ಭಾರತದ ಗವರ್ನರ್ ಆಗಿದ್ದಡಾಲ್ ಹೌಸಿವಧಿಯಲ್ಲಿ ಮಹಾರಾಜ ಪಂಜಾಬಿನ ದುಲೀಪ್ ಸಿಂಗ್ ಸಂಸ್ಥಾನವು ಬ್ರಿಟೀಷರ ಕೈವಶವಾಗಿತ್ತು. ಆಗ ರಾಜಪರಿವಾರ ಇಂಗ್ಲೆಂಡಿನಲ್ಲಿ ಆಶ್ರಯ ಪಡೆಯಿತು. ರಾಜಕುಮಾರಿ ಸೋಫಿಯಾ ತನ್ನ ತಾಯಿ ರಾಣಿ ಬಿಂಬ ಮುಲ್ಲರ್ ಅವರೊಡನೆ ವಾಸವಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian princessಭಾರತೀಯ ರಾಜಕುಮಾರಿSophia Alexandra Duleep SinghRoyal Mailspecial stampಸೋಫಿಯಾ ಅಲೆಗ್ಸಾಂಡ್ರಾ ದುಲೀಪ್ ಸಿಂಗ್ರಾಯಲ್ ಮೇಲ್ವಿಶೇಷ ಅಂಚೆಚೀಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


