ದೇಶ

ನಾಲ್ಕು ದಿನಗಳ ನಂತರ ಕಡಲ್ಗಳ್ಳರಿಂದ 22 ಭಾರತೀಯ ನಾವಿಕರ ಬಿಡುಗಡೆ

ವಾಯುವ್ಯ ಆಫ್ರಿಕಾದ ಬೆನಿನ್ ನಲ್ಲಿ ಕಡಲ್ಗಳ್ಳರಿಂದ ಅಪಹರಣಗೊಂಡಿದ್ದ 22 ಭಾರತೀಯ ನಾವಿಕರು ಬಿಡುಗಡೆಯಾಗಿದ್ದಾರೆ. ನಾಲ್ಕು ದಿನಗಳ ನಂತರ ಎಲ್ಲಾ ನಾವಿಕರು ಸುರಕ್ಷಿತವಾಗಿ ಮರಳಿದ್ದಾರೆ.

ನಾಲ್ಕು ದಿನಗಳ ನಂತರ ಕಡಲ್ಗಳ್ಳರಿಂದ  22 ಭಾರತೀಯ ನಾವಿಕರ ಬಿಡುಗಡೆ
ನಾಲ್ಕು ತಿಂಗಳ ಹಿಂದೆ ಅಪಹರಣಗೊಂಡಿದ್ದ ಅನಿಲ ಸಾಗಾಟದ ಹಡಗು ಮಾರೈನ್ ಎಕ್ಸ್ ಪ್ರೆಸ್ ಚಿತ್ರ
Published On :

ಮುಂಬೈ:   ವಾಯುವ್ಯ ಆಫ್ರಿಕಾದ ಬೆನಿನ್ ನಲ್ಲಿ ಕಡಲ್ಗಳ್ಳರಿಂದ ಅಪಹರಣಗೊಂಡಿದ್ದ 22 ಭಾರತೀಯ ನಾವಿಕರು ಬಿಡುಗಡೆಯಾಗಿದ್ದಾರೆ. ನಾಲ್ಕು ದಿನಗಳ ನಂತರ ಎಲ್ಲಾ ನಾವಿಕರು ಸುರಕ್ಷಿತವಾಗಿ ಮರಳಿದ್ದಾರೆ.

ಎಲ್ಲಾ ನಾವಿಕರು ಹಾಗೂ  ಅನಿಲ ಸಾಗಾಟದ ಹಡಗು ಮಾರೈನ್ ಎಕ್ಸ್ ಪ್ರೆಸ್    ವಾಪಾಸ್ಸಾಗಿದೆ ಎಂದು ಹಡಗುಯಾನದ ಮಹಾನಿರ್ದೇಶಕಿ ಮಾಲಿನಿ ಶಂಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

 ಎಲ್ಲಾ  ನಾವಿಕರು ಸುರಕ್ಷಿತವಾಗಿದ್ದು, ಮತ್ತೆ ನೌಕಾಯಾನಕ್ಕೆ ಹಡಗನ್ನು ನಿಯೋಜಿಸಲಾಗುವುದು ಆದರೆ, ಹಡಗಿನಲ್ಲಿದ್ದ ಸರಕಿನ ವಿಮೋಚನಾ ಮೌಲ್ಯ ಪಾವತಿ ಸಂಬಂಧ ಯಾವ ಮಾಹಿತಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.

ಅನಿಲ ಸಾಗಿಸುತ್ತಿದ್ದ ಮಾರೈನ್ ಎಕ್ಸ್ ಪ್ರೆಸ್ ಹಡಗನ್ನು  ಫೆಬ್ರುವರಿ 1ರಂದು  ಕಡಲ್ಗಳ್ಳರು ಅಪಹರಿಸಿದರಲ್ಲದೇ, ಎಲ್ಲಾ ಸಂಪರ್ಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದರು. ಈ ಹಡಗಿನಲ್ಲಿ 13 ಸಾವಿರ ಟನ್ ಸರಕನ್ನು ಸಾಗಿಸಲಾಗುತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.