ಅಂಕಿತ್ ಸಕ್ಸೇನಾ ಕೊಲೆಗಾರರನ್ನು ಗಲ್ಲಿಗೇರಿಸಿ: ಅಂಕಿತ್ ತಂದೆ ಆಗ್ರಹ
ವೃತ್ತಿಪರ ಫೋಟೋಗ್ರಾಫರ್ ಅಂಕಿತ್ ಸಕ್ಸೇನನನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಿ ಎಂದು ಅಂಕಿತ್ ತಂದೆ ಯಶ್ಪಾಲ್ ಸಕ್ಸೇನಾ ಮನವಿ ಮಾಡಿದ್ದಾರೆ...

Published On :
ನವದೆಹಲಿ: ವೃತ್ತಿಪರ ಫೋಟೋಗ್ರಾಫರ್ ಅಂಕಿತ್ ಸಕ್ಸೇನನನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಿ ಎಂದು ಅಂಕಿತ್ ತಂದೆ ಯಶ್ಪಾಲ್ ಸಕ್ಸೇನಾ ಮನವಿ ಮಾಡಿದ್ದಾರೆ.
23 ವರ್ಷದ ಅಂಕಿತ್ ಸಕ್ಸೇನಾ 20 ವರ್ಷದ ತನ್ನ ಮುಸ್ಲಿಂ ಗೆಳತಿ ಶೆಹಜಾದಿ ಅವರೊಂದಿಗೆ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಪ್ರೇಮ ಸಂಬಂಧಕ್ಕೆ ಹುಡುಗಿಯ ಮನೆಯವರ ತೀವ್ರ ವಿರೋಧವಿತ್ತು. ಅಂತೆ ಕಳೆದ ಫೆಬ್ರವರಿ 1ರಂದು ಶೆಹಜಾದಿ ಮನೆಯವರು ಅಂಕಿನ್ ಸಕ್ಸೇನಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕತ್ತು ಸೀಳಿ ಕೊಲೆ ಮಾಡಿದ್ದರು.
ಈ ಪ್ರಕರಣ ಸಂಬಂಧ ಮಗನ ಸಾವಿಗೆ ನ್ಯಾಯ ಸಿಗಬೇಕು. ಕೊಲೆಗಾರರನ್ನು ಗಲ್ಲಿಗೇರಿಸಬೇಕು. ನಾನೊಬ್ಬ ಸಾಮಾನ್ಯ ವ್ಯಕ್ತಿ. ಮಗನ ಸಾವಿಗೆ ನ್ಯಾಯ ಒದಗಿಸುವ ಹೋರಾಟಕ್ಕೆ ನನ್ನ ಬಳಿ ಯಾವುದೇ ಹಣ ಮೂಲವಿಲ್ಲ. ಹೀಗಾಗಿ ದೆಹಲಿ ಸರ್ಕಾರ ಕಾನೂನು ಹೋರಾಟಕ್ಕಾಗಿ ಉತ್ತಮ ವಕೀಲರನ್ನು ಒದಗಿಸಲು ಸಹಾಯ ಮಾಡಿದರೆ ಅವರಿಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಹೇಳಿದ್ದಾರೆ.
ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


