ನಾಗ ಒಪ್ಪಂದ ಏನಾಯ್ತು :ಪ್ರಧಾನಿ ಮೋದಿ ಮಾತಿಗೆ ಯಾವುದೇ ಅರ್ಥ ಇರಲ್ಲ: ರಾಹುಲ್ ಗಾಂಧಿ
ಪ್ರಧಾನಮಂತ್ರಿ ನರೇಂದ್ರಮೋದಿ 2015ರಲ್ಲಿ ನಾಗ ಬಂಡುಕೋರರೊಂದಿಗೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದ ಏನಾಯ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ 2015ರಲ್ಲಿ ನಾಗ ಬಂಡುಕೋರರೊಂದಿಗೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದ ಏನಾಯ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
2015 ಆಗಸ್ಟ್ ರಂದು ಪ್ರಧಾನಿ ನರೇಂದ್ರಮೋದಿ ನಾಗ ಒಪ್ಪಂದ ಮಾಡಿಕೊಳ್ಳುವ ಮೂಲಕ ಪ್ರಧಾನಮಂತ್ರಿ ನರೇಂದ್ರಮೋದಿ ಹೊಸ ಇತಿಹಾಸ ಸೃಷ್ಟಿಸಿದ್ದರು. ಆದರೆ. ಈಗ ಅದು ಏಲ್ಲಿದೆ. ಪ್ರಧಾನಿ ಮೋದಿ ಮಾತಿಗೆ ಯಾವುದೇ ಅರ್ಥವಿರುವುದಿಲ್ಲಾ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.
ನಾಗ ಬಂಡೋಕೋರರೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ನರೇಂದ್ರಮೋದಿ ಆಗಸ್ಟ್ 3. 2015ರಂದು ಘೋಷಿಸಿದ್ದರು. ಈ ಒಪ್ಪಂದ ಈಶಾನ್ಯ ರಾಜ್ಯಗಳಲ್ಲಿ ಸಮಸ್ಯೆಗಳಿಗೆ ಕೊನೆಯಾಗುವ ಬದಲು ಹೊಸ ಸಮಸ್ಯೆಗಳ ಆರಂಭವಾಗಿದೆ. ಇದು ಧೀರ್ಘಕಾಲ ಉಳಿಯುವಂತಹದ್ದಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಫೆ.27ರಂದು ನಾಗಾಲ್ಯಾಂಡ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ನೆಪ್ಯೂ ರಿಯಾ ನಾಯಕತ್ವದ ಎನ್ ಡಿಪಿಪಿ ಜೊತೆ ಬಿಜೆಪಿ ಮೈತ್ರಿಗೆ ಮುಂದಾದ್ದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಬುಡಕಟ್ಟು ಸಮುದಾಯ, ನಾಗರಿಕ ಸಮಾಜದ ಸಮಸ್ಯೆ ಬಗೆಹರಿಸಿ ನಾಗಾಲ್ಯಾಂಡ್ ನ ರಾಜಕೀಯ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಬೇಡಿಕೆಗೆ ಒಪ್ಪಿ. ಆಡಳಿತಾರೂಢ ಎನ್ ಪಿಎಫ್ ಸೇರಿದಂತೆ 11 ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸದಿರಲು ತೀರ್ಮಾನಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


