ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ: ಟಿವಿ ಚಾನೆಲ್'ಗೆ ಮತ್ತೆ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಬೆದರಿಕೆ
ಮಲಯಾಳಿ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚಾನೆಲ್ ವೊಂದಕ್ಕೆ ಮತ್ತೆ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದಾನೆಂದು...

Published On :
ಕೊಚ್ಚಿ: ಮಲಯಾಳಿ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚಾನೆಲ್ ವೊಂದಕ್ಕೆ ಮತ್ತೆ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದಾನೆಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಟಿವಿ ಚಾನೆಲ್ ತಮಗೆ ಬಂದಿದ್ದ ಬೆದರಿಕೆ ಕರೆಯನ್ನು ಪ್ರಸಾರ ಮಾಡಿತ್ತು. ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಎಂದು ಹೇಳಿ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದನ್ನು ಮತ್ತೆ ಪ್ರಸಾರ ಮಾಡಿತ್ತು.
ನಾನು ರವಿ ಪೂಜಾರಿ. ಆಸ್ಟ್ರೇಲಿಯಾದಿಂದ ಕರೆ ಮಾಡುತ್ತಿದ್ದಾನೆ. ಗುಂಡಿನ ದಾಳಿ ನಡೆಸಿದ್ದು ನಾನೇ. ನನ್ನ ಕಡೆಯ ಹುಡುಗರು ದಾಳಿ ನಡೆಸಿದ್ದರು. ಪೊಲೀಸರು ಅವರ ಕೆಲಸ ಮಾಡುತ್ತಾರೆ. ನಾನು ನನ್ನ ಕೆಲಸವನ್ನು ಮಾಡುತ್ತೇನೆ. ಮಹಿಳೆಯಿಂದ ಪಡೆದ ಹಣವನ್ನು, ಹಣ ಹಾಕಿದ್ದವರಿಗೆ ನೀಡುತ್ತೇನೆಂದು ಹೇಳಿರುವುದು ಆಡಿಯೋ ಕ್ಲಿಪ್ ನಲ್ಲಿ ಕಂಡು ಬಂದಿದೆ.
ಡಿಸೆಂಬರ್ 15 ರಂದು ಮಲಯಾಳಿ ನಟಿ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಮುಂಬೈ ಅಂಡರ್ ವರ್ಲ್ಡ್ ಡಾನ್ ಹೆಸರು ಕೇಳಿ ಬಂದಿತ್ತು. ಇಬ್ಬರು ಆಗಂತುಕರು ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತುವಾಗ ರವಿ ಪೂಜಾರಿ ಪಡೆದಿರುವ ಪತ್ರವನ್ನು ಎಸೆದು ಹೋಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


