ದೇಶ

ಅಂಡಮಾನ್​ ನಿಕೋಬಾರ್ ನ ಮೂರು ದ್ವೀಪಗಳಿಗೆ ಪ್ರಧಾನಿ ಮೋದಿ ಮರುನಾಮಕರಣ

ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್....

ಅಂಡಮಾನ್​ ನಿಕೋಬಾರ್ ನ ಮೂರು ದ್ವೀಪಗಳಿಗೆ ಪ್ರಧಾನಿ ಮೋದಿ ಮರುನಾಮಕರಣ
ಅಂಡಮಾನ್ ನಿಕೋಬಾರ್ ದ್ವೀಪ
Published On :
ನವದೆಹಲಿ: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್​ ನಿಕೋಬಾರ್ ​ನ ಪ್ರಮುಖ ಮೂರು ದ್ವೀಪಗಳಾದ ರೋಸ್, ನೈಲ್ ಹಾಗೂ ಹೈವ್ಲೋಕ್ ದ್ವೀಪಗಳಿಗೆ ಭಾನುವಾರ ಮರು ನಾಮಕರಣ ಮಾಡಿದ್ದಾರೆ.
ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 75ನೇ ಪೋರ್ಟ್‌ಬ್ಲೇರ್‌ ಭೇಟಿಯ 75ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗಿಯಾಗಲು ಇಂದು ದ್ವೀಪ ಸಮೂಹಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಈ ಮೂರು ದ್ವೀಪಗಳಿಗೆ ಅಧಿಕೃತವಾಗಿ ಮರುನಾಮಕರಣ ಮಾಡಿದರು.
ರೋಸ್​ಲ್ಯಾಂಡ್​ಗೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ದ್ವೀಪ, ನೇಲ್​ ಐಸ್​ಲ್ಯಾಂಡ್​ಗೆ ಶಾಹೀದ್ ದ್ವೀಪ ಮತ್ತು ಹೈವ್ಲೋಕ್​ ದ್ವೀಪಕ್ಕೆ ಸ್ವರಾಜ್​ ದ್ವೀಪವೆಂದು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ, ಈ ವಿಶೇಷ ದಿನದ ಸ್ಮರಣಾರ್ಥ ಅಂಚೆಚೀಟಿ, 75 ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಲ್ಲದೆ ದಿ.ಬೋಸ್​ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದರು.
ಇದಕ್ಕೂ ಮೊದಲು ಮರೀನಾ ಪಾರ್ಕ್​ಗೆ ತೆರಳಿದ ಮೋದಿ, 150 ಅಡಿ ಎತ್ತರದಲ್ಲಿ ಭಾರತದ ಧ್ವಜ ಹಾರಿಸಿದರು. ಹಾಗೇ ಅಲ್ಲಿಯೇ ಇದ್ದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.