ಉತ್ತರ ಪ್ರದೇಶ: ಬಿಡಾಡಿ ದನಗಳನ್ನು ಸರ್ಕಾರಿ ಶಾಲೆ, ಕಟ್ಟಡಗಳಲ್ಲಿ ಕೂಡಿ ಹಾಕಿದ ಆಗ್ರಾ ರೈತರು!
ಬಿಡಾಡಿ ದನಗಳನ್ನು ಸರ್ಕಾರಿ ಶಾಲೆ, ಕಟ್ಟಡಗಳಲ್ಲಿ ರೈತರೇ ಕೂಡಿಹಾಕಿದ್ದು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Published On :
ಆಗ್ರಾ: ಬಿಡಾಡಿ ದನಗಳನ್ನು ಸರ್ಕಾರಿ ಶಾಲೆ, ಕಟ್ಟಡಗಳಲ್ಲಿ ರೈತರೇ ಕೂಡಿಹಾಕಿದ್ದು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಬಿಡಾಡಿ ದನಗಳಿಂದಾಗಿ ಬೆಳೆಗಳು ಹಾನಿಗೀಡಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವ ರೈತರು, ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶದ ಆಗ್ರಾ, ಅಲೀಘರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.
ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಬೀದಿ ದನಗಳನ್ನು ಕಟ್ಟಿಹಾಕಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸಿಎಂ ಯೋಗಿ ಆದಿತ್ಯನಾಥ್, ಬೀದಿ ದನಗಳ ಬಗ್ಗೆ ಸೂಕ್ತ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿರುವ ಗೋಮಾಳದ ಜಾಗವನ್ನು ತೆರವುಗೊಳಿಸುವಂತೆಯೂ ಸೂಚನೆ ನೀಡಿದ್ದಾರೆ.
ಕೆಲವೇ ದಿನಗಳ ಹಿಂದೆ ಮಥುರಾದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿ ಸಮಸ್ಯೆ ಉಂಟಾಗಿರುವ ಬಗ್ಗೆ ವರದಿ ಪ್ರಕಟವಾಗಿತ್ತು. ಜನಸಂದಣಿ ಹೆಚ್ಚಿದ್ದ ಮಾರುಕಟ್ಟೆ ಪ್ರದೇಶಗಳಿಗೂ ಸಹ ಬೀದಿಯಲ್ಲಿ ತಿರುಗುವ ಹಸುಗಳು ದಾಂಗುಡಿ ಇಡುತ್ತಿವೆ. ಮಥುರಾದಲ್ಲಿ ಈಗಾಗಲೇ 100 ಖಾಸಗಿ ಗೋಶಾಲೆಗಳಿದ್ದು, ಬಹುತೇಕ ಎಲ್ಲಾ ಗೋಶಾಲೆಗಳೂ ತುಂಬಿವೆ. ಗೋಶಾಲೆಗಳಲ್ಲಿ ತುಂಬಿದ್ದು ಬಿಡಾಡಿ ದನಗಳಿಗೆ ತುರ್ತಾಗಿ ಆಶ್ರಯದ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


