ದೇಶ

ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಬೇಡಿ, ಆತ ಓರ್ವ ಕ್ರೀಡಾಪಟು ಆಗಿದ್ದ: ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್!

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭಗವಾನ್ ಹನುಮಂತನ ಜಾತಿ ಚರ್ಚೆಗೆ ಈಗ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಎಂಟ್ರಿ ನೀಡಿದ್ದು, ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಬೇಡಿ ಏಕೆಂದರೆ ಆತ ಓರ್ವ ಕ್ರೀಡಾಪಟು ಆಗಿದ್ದ ಎಂದು ಹೇಳಿದ್ದಾರೆ.

ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಬೇಡಿ, ಆತ ಓರ್ವ ಕ್ರೀಡಾಪಟು ಆಗಿದ್ದ: ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್!
ಚೇತನ್ ಚೌಹಾಣ್
Published On :
ಅಮ್ರೋಹಾ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭಗವಾನ್ ಹನುಮಂತನ ಜಾತಿ ಚರ್ಚೆಗೆ ಈಗ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಎಂಟ್ರಿ ನೀಡಿದ್ದು, ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಬೇಡಿ ಏಕೆಂದರೆ ಆತ ಓರ್ವ ಕ್ರೀಡಾಪಟು ಆಗಿದ್ದ ಎಂದು ಹೇಳಿದ್ದಾರೆ. 
ಹನುಮಂತನನ್ನು ಈಗಲೂ ಹಲವು ಕ್ರೀಡಾಪಟುಗಳು ಆರಾಧುಸುತ್ತಾರೆ, ಹನುಮಂತನ ಜಾತಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಚೇತನ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.  ಹನುಮಂತ ಓರ್ವ ಕ್ರೀಡಾಪಟು ಆಗಿದ್ದ, ಆತ ತನ್ನ ಶತ್ರುಗಳೊಂದಿಗೆ ಕುಸ್ತಿ ಮಾಡುತ್ತಿದ್ದ ಎಂದು ನಂಬಿದ್ದೇನೆ. ಶಕ್ತಿ ಹಾಗೂ ಸಾಮರ್ಥ್ಯಗಳಿಗಾಗಿ ಈಗಲೂ ಹಲವು ಕ್ರೀಡಾಪಟುಗಳು ಹನುಮಂತನನ್ನು ಆರಾಧಿಸುತ್ತಾರೆ ಎಂದು ಚೌಹಾಣ್ ಹೇಳಿದ್ದಾರೆ. 
ಯಾವುದೇ ಕ್ರೀಡಾಪಟುವೂ ಹನುಮಂತನನ್ನು ಆತನ ಜಾತಿ ಯಾವುದು ಎಂದು ನೋಡಿ ಆರಾಧಿಸುವುದಿಲ್ಲ. ಸಂತ, ಅತೀಂದ್ರಿಯ ಶಕ್ತಿಗಳಿಗೆ ಜಾತಿ ಇರುವುದಿಲ್ಲ. ಹಾಗೆಯೇ ಹನುಮಂತನಿಗೂ ಸಹ. ನಾನು ಆತನನ್ನು ದೇವರೆಂದು ಪರಿಗಣಿಸುತ್ತೇನೆ ಎಂದು ಚೌಹಾಣ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.