ಉತ್ತರ ಗಡಗಡ; ಚಳಿಗೆ ತತ್ತರಿಸಿದ ಹರ್ಯಾಣದ ಕರ್ನಲ್ ನಲ್ಲಿ ಶೂನ್ಯ ತಾಪಮಾನ
ತೀವ್ರ ಚಳಿಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಶಕಗಳ ಬಳಿಕ ಹರ್ಯಾಣದಲ್ಲಿ ಶೂನ್ಯ ತಾಪಮಾನ ದಾಖಲಾಗಿದೆ.

Published On :
ನವದೆಹಲಿ: ತೀವ್ರ ಚಳಿಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಶಕಗಳ ಬಳಿಕ ಹರ್ಯಾಣದಲ್ಲಿ ಶೂನ್ಯ ತಾಪಮಾನ ದಾಖಲಾಗಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಕುಸಿದಿದ್ದು, ಹರ್ಯಾಣದಲ್ಲಿ ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಶೂನ್ಯ ಡಿಗ್ರಿ ತಾಪಮಾನ ದಾಖಲಾಗಿದೆ. ಹರ್ಯಾಣದ ಕರ್ನಲ್ ನಲ್ಲಿ ಇಂದು ಶೂನ್ಯ ತಾಪಮಾನ ದಾಖಲಾಗಿದೆ. ಅಂತೆಯೇ ಗುರುಗ್ರಾಮದಲ್ಲಿ 1.4 ಡಿಗ್ರಿಗೆ ಕುಸಿದಿದ್ದು, ಹಿಸ್ಸಾರ್ ನಲ್ಲಿ ತಾಪಮಾನ 2.7ಕ್ಕೆ ಕುಸಿದಿದೆ.
ಇತ್ತ ರೋಹ್ಟಕ್ ನಲ್ಲಿ ತಾಪಮಾನ 3.8ಕ್ಕೆ ಕುಸಿದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಡಿಗ್ರಿಗೆ ತಾಪಮಾನ ಕುಸಿದಿದೆ.
ಇನ್ನು ಕರ್ನಾಟಕದಲ್ಲೂ ತಾಪಮಾನ ಕುಸಿದಿದ್ದು, ಇಂದು ಬೆಂಗಳೂರಿನಲ್ಲಿ ತಾಪಮಾನ 20 ಡಿಗ್ರಿಯಷ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


