ಪಾಕ್'ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಕಿರುಕುಳ: ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವಾಲಯ
ಪಾಕಿಸ್ತಾನದಲ್ಲಿ ನೆಲೆಸಿರುವ ಹಲವು ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ನೆರೆ ರಾಷ್ಟ್ರ ಭಾರೀ ಕಿರುಕುಳ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ...

Published On :
ನವದೆಹಲಿ: ಪಾಕಿಸ್ತಾನದಲ್ಲಿ ನೆಲೆಸಿರುವ ಹಲವು ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ನೆರೆ ರಾಷ್ಟ್ರ ಭಾರೀ ಕಿರುಕುಳ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.
ಪಾಕಿಸ್ತಾನದಲ್ಲಿರುವ ನೆಲೆಸಿರುವ ರಾಯಭಾರಿ ಅಧಿಕಾರಿಗಳ ನಿವಾಸಗಳಿಗೆ ಹೊಸ ಗ್ಯಾಸ್ ಕನೆಕ್ಷನ್ ನೀಡಲು ನಿರಾಕರಿಸುವುದು, ಅಧಿಕಾರಿಘಳನ್ನು ಭೇಟಿಯಾಗಲು ಬರುವ ಅತಿಥಿಗಳಿಗೆ ಕಿರುಕುಳ ನೀಡುವುದು, ಹಿರಿಯ ಅಧಿಕಾರಿಗಳ ಇಂಟರ್ನೆಟ್ ಸಂಪರ್ಕಗಳನ್ನು ತಡೆಯುವುದು ಹೀಗೆ ನಾನಾ ರೀತಿಯಲ್ಲಿ ಪಾಕಿಸ್ತಾನ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನದಿಂದ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಕಿರುಕುಳವಾಗುತ್ತಿರುವುದು ಇದು ಮೊದಲನೇನಲ್ಲ. ಈ ಹಿಂದೆ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೂ ಇಂತಹದ್ದೇ ಸಾಕಷ್ಟು ದೂರುಗಳು ಬಂದಿದ್ದವು. ಈ ನಡುವೆ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳೂ ಕೂಡ ಆರೋಪ ಮಾಡಿದ್ದು, ತಮಗೂ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ವಿಚಾರ ಕುರಿತು ಪಾಕಿಸ್ತಾನದ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಈ ರೀತಿಯ ಸಮಸ್ಯೆಗಳನ್ನು ನೀಡದಂತೆ ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಸ್ಲಾಮಾಬಾದ್IslamabadPakistanಪಾಕಿಸ್ತಾನಕಿರುಕುಳharassmentವಿದೇಶಾಂಗ ಸಚಿವಾಲಯIndian EnvoyMEAಭಾರತೀಯ ರಾಯಭಾರಿ ಅಧಿಕಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


