ಜಿಎಸ್ಟಿ ಸಭೆ: 34 ವಸ್ತುಗಳನ್ನು ಬಿಟ್ಟು, ಮಿಕ್ಕೆಲ್ಲವೂ 18% ತೆರಿಗೆ ವ್ಯಾಪ್ತಿಗೆ; ಎಲೆಕ್ಟ್ರಾನಿಕ್ಸ್, ಸಿನಿಮಾ ಟಿಕೆಟ್ ಬೆಲೆ ಇಳಿಕೆ
ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ- ಜಿಎಸ್ ಟಿ ಸಭೆಯಲ್ಲಿ 34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ. 18 ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್ , ಸಿನಿಮಾ ಟಿಕೆಟ್ ಬೆಲೆ ಕೂಡಾ ಇಳಿಕೆಯಾಗಲಿದೆ.

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ- ಜಿಎಸ್ ಟಿ ಸಭೆಯಲ್ಲಿ 34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ. 18 ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್ , ಸಿನಿಮಾ ಟಿಕೆಟ್ ಬೆಲೆ ಇಳಿಕೆಯಾಗಲಿದೆ.
ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳನ್ನು ಸುದ್ದಿಗಾರರಿಗೆ ತಿಳಿಸಿದ ಅರುಣ್ ಜೇಟ್ಲಿ, ಈಗ 34 ಐಷರಾಮಿ ವಸ್ತುಗಳಿಗೆ ಮಾತ್ರ ಶೇ. 28 ತೆರಿಗೆ ವಿಧಿಸಲಾಗುವುದು, ಎಕಾನಾಮಿ ದರ್ಜಿಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್ ಟಿಯನ್ನು ಶೇ. 5 ಹಾಗೂ ಬ್ಯೂಸಿನೆಸ್ ದರ್ಜೆಯ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ, 12 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
100ರೂ. ವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. 18 ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿದೆ. 100 ರೂ. ಮೇಲ್ಪಟ್ಟ ಸಿನಿಮಾ ಟಿಕೆಟ್ ಮೇಲೆ ಶೇ. 18 ರಷ್ಟು ತೆರಿಗೆ ವಿಧಿಸಲಾಗುವುದು ಎಂದರು.
ಮಾನಿಟರ್ , ಟಿವಿ, ಪವರ್ ಬ್ಯಾಂಕ್ ಮತ್ತಿತರ ವಸ್ತುಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ದಿವ್ಯಾಂಗರು ಬಳಸುವ ವಸ್ತುಗಳ ಮೇಲೆ ಶೇ, 5ರಷ್ಟು ಇಳಿಸಲಾಗಿದ್ದು, ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಸೇವೆ ಒದಗಿಸುವ ಬ್ಯಾಂಕುಗಳಿಗೆ ಜಿಎಸ್ ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಜನವರಿ 1. 2019ರಿಂದ ಪರಿಷ್ಕೃತ ಜಿಎಸ್ ಟಿ ದರಗಳು ಜಾರಿಗೆ ಬರಲಿದ್ದು, ಇಂದು ಮಾಡಿರುವ ಜಿಎಸ್ ಟಿ ದರ ಪರಿಷ್ಕರಣೆಯಿಂದಾಗಿ ಸುಮಾರು 5500 ಕೋಟಿ ರೂ. ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


