ದೇಶ

ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ; ಭೀಕರ ಅಪಘಾತದಲ್ಲಿ ಶಿಕ್ಷಕರು ಸೇರಿ 16 ವಿದ್ಯಾರ್ಥಿಗಳ ದುರ್ಮರಣ!

ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ 400 ಮೀಟರ್ಗಳಷ್ಟು ಆಳದ ಕಂದಕಕ್ಕೆ ಬಿದ್ದ ಪರಿಣಾಮ ಶಿಕ್ಷಕರು ಸೇರಿದಂತೆ 16 ವಿದ್ಯಾರ್ಥಿಗಳು...

ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ; ಭೀಕರ ಅಪಘಾತದಲ್ಲಿ ಶಿಕ್ಷಕರು ಸೇರಿ 16 ವಿದ್ಯಾರ್ಥಿಗಳ ದುರ್ಮರಣ!
ಸಂಗ್ರಹ ಚಿತ್ರ
Published On :
ಕಠ್ಮಂಡು: ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ 400 ಮೀಟರ್ಗಳಷ್ಟು ಆಳದ ಕಂದಕಕ್ಕೆ ಬಿದ್ದ ಪರಿಣಾಮ ಶಿಕ್ಷಕರು ಸೇರಿದಂತೆ 16 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಭೀಕರ ಘಟನೆ ನೇಪಾಳದಲ್ಲಿ ಸಂಭವಿಸಿದೆ. 
ಶೈಕ್ಷಣಿಕ ಪ್ರವಾಸಕ್ಕಾಗಿ ತೆರಳಿದ್ದರು. ಈ ವೇಳೆ ದಾಂಗ್ ಜಿಲ್ಲೆಯ ತುಲ್ಸಿಪುರದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದು 12 ಮಂದಿಗೆ ಗಂಭೀರ ಗಾಯಗಳಾಗಿವೆ. 
ಘೋರಾಹಿಯಲ್ಲಿನ ಕೃಷ್ಣಾಸೆನ್ ಟೆಕ್ನಿಕಲ್ ಸ್ಕೂಲ್ ನಿಂದ 31 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದರು. ಒಂದು ದಿನದ ಪ್ರವಾಸಕ್ಕಾಗಿ ಅವರೆಲ್ಲರೂ ತೆರಳಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.