ದೇಶ

ಚೆನ್ನೈನ 2 ರುಪಾಯಿ ಡಾಕ್ಟರ್ ಜಯಚಂದ್ರನ್ ವಿಧಿವಶ, ಕಣ್ಣೀರ ವಿದಾಯ!

ತನ್ನ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಎರಡು ರುಪಾಯಿ ಮಾತ್ರ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಎಸ್ ಜಯಚಂದ್ರನ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಚೆನ್ನೈನ 2 ರುಪಾಯಿ ಡಾಕ್ಟರ್ ಜಯಚಂದ್ರನ್ ವಿಧಿವಶ, ಕಣ್ಣೀರ ವಿದಾಯ!
ಸಂಗ್ರಹ ಚಿತ್ರ
Published On :
ಚೆನ್ನೈ: ತನ್ನ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಎರಡು ರುಪಾಯಿ ಮಾತ್ರ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಎಸ್ ಜಯಚಂದ್ರನ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 
ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಜಯಚಂದ್ರನ್ ಅವರು 1970ರಲ್ಲಿ ಚೆನ್ನೈನ ಹಳೆಯ ವಾಶೇರ್ಮೆನ್ಪೇಟ್ ನಲ್ಲಿ ಪ್ರಾಕ್ಟಿಸ್ ಶುರು ಮಾಡಿದ್ದರು. ಮೊದಲಿಗೆ ಜಯಚಂದ್ರನ್ ಅವರು 25 ಪೈಸೆ ಮಾತ್ರ ರೋಗಿಗಳ ಹತ್ತಿರ ಪಡೆಯುತ್ತಿದ್ದರು. 
ಬುಧವಾರ ಬೆಳಗ್ಗೆ 5.15ರ ಸುಮಾರಿಗೆ ಗ್ರೀಮ್ಸ್ ರೋಡ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಜಯಚಂದ್ರನ್ ಅವರು ವಿಧಿವಶರಾಗಿದ್ದಾರೆ ಎಂದು ಅವರ ಮೊದಲ ಮಗ ಡಾ. ಜ ಶರವಣ್ ಜಗನ್ ತಿಳಿಸಿದ್ದಾರೆ. 
ಜಯಚಂದ್ರನ್ ಅವರು ಮೃತಪಟ್ಟಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.