ದೇಶ

68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸದಲ್ಲಿದ್ದಾರೆ: ವಿ.ಕೆ.ಸಿಂಗ್

ವಿಶ್ವದ 68 ರಾಷ್ಟ್ರಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆಂದು ಸಂಸತ್ತಿನಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜ.ವಿ.ಕೆ.ಸಿಂಗ್ ಅವರು ಹೇಳಿದ್ದಾರೆ...

68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸದಲ್ಲಿದ್ದಾರೆ: ವಿ.ಕೆ.ಸಿಂಗ್
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜ.ವಿ.ಕೆ.ಸಿಂಗ್
Published On :
ನವದೆಹಲಿ: ವಿಶ್ವದ 68 ರಾಷ್ಟ್ರಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆಂದು ಸಂಸತ್ತಿನಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜ.ವಿ.ಕೆ.ಸಿಂಗ್ ಅವರು ಹೇಳಿದ್ದಾರೆ. 
ಮುಂಬೈ ಮೂಲಕ ಸಾಫ್ಟ್ ವೇರ್ ಇಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿಯವರು ಗೂಢಚಾರ್ಯ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಕೆಲ ವರ್ಷಗಳ ಹಿಂದೆ ಬಂಧನಕ್ಕೊಳಪಡಿಸಿತ್ತು. ಮೂರು ವರ್ಷಗಳ ಬಳಿಕ ಹಮೀದ್ ಅವರು ನಿನ್ನೆಯಷ್ಟೇ ಪಾಕಿಸ್ತಾನದ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. 
ಈ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿರುವ ವಿ.ಕೆ.ಸಿಂಗ್ ಅವರು, 68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ. 40 ಭಾರತೀಯರು ಸೆರೆವಾಸದ ಅವಧಿಯಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.