ದೇಶ

ದೇಶಾದ್ಯಂತ ವಿಜಯ್ ದಿವಸ್ ಆಚರಣೆ: ಹುತಾತ್ಮರನ್ನು ಸ್ಮರಿಸಿದ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ

1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಅಂಗವಾಗಿ ದೇಶಾದ್ಯಂತ ಇಂದು ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಹುತಾತ್ಮ ಯೋಧರನ್ನು ಸ್ಮರಿಸಲಾಗುತ್ತಿದೆ.

ದೇಶಾದ್ಯಂತ ವಿಜಯ್ ದಿವಸ್ ಆಚರಣೆ: ಹುತಾತ್ಮರನ್ನು ಸ್ಮರಿಸಿದ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ
ನಿರ್ಮಲಾ ಸೀತಾರಾಮನ್
Published On :
ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಅಂಗವಾಗಿ ದೇಶಾದ್ಯಂತ ಇಂದು ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಹುತಾತ್ಮ ಯೋಧರನ್ನು ಸ್ಮರಿಸಲಾಗುತ್ತಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನೆಯ ಉಪ ಮುಖ್ಯಸ್ಥ ಲೆಪ್ಟಿನೆಟ್ ಜನರಲ್ ದೇವರಾಜ್ ಅಂಬು,  ನೌಕದಳದ ಮುಖ್ಯಸ್ಥ ಆಡ್ಮೀರಲ್ ಸುನೀಲ್ ಲಾಂಬಾ, ಏರ್ ಚೀಪ್ ಮಾರ್ಷಲ್  ಬಿೇಂದ್ರ ಸಿಂಗ್ ದಾನೊಹಾ   ಅಮರ್ ಜ್ಯೋತಿ ಬಳಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಆರ್ಪಿಸಿದರು.
ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಅವರ ಅಪ್ರತಿಮ ಧೈರ್ಯ, ದೇಶ ಭಕ್ತಿ ನಮ್ಮ ದೇಶಕ್ಕೆ ಸುರಕ್ಷತೆ ಒದಗಿಸಿದ್ದು, ಅವರ ಸೇವೆ ಯಾವಾಗಲು ಪ್ರತಿಯೊಬ್ಬ ಭಾರತೀಯರನ್ನು ಸ್ಪೂರ್ತಿ ತುಂಬಲಿದೆ ಎಂದು ಟ್ವೀಟರ್ ಸಂದೇಶ ಮಾಡಿದ್ದಾರೆ.
1971ರಲ್ಲಿ ಸಶಸ್ತ್ರ ಪಡೆಗಳು ದೇಶಕ್ಕಾಗಿ ಹೋರಾಡಿ ವಿಶ್ವದಾದ್ಯಂತ ಮಾನವ ಸ್ವಾತಂತ್ರ್ಯ  ತತ್ವಗಳನ್ನು ಹರಡಿದ್ದಾರೆ.  ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ  ಯೋದರಿಗೆ ನಾವೆಲ್ಲ ಸಂತಾಪ ಸೂಚಿಸಬೇಕಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್   ಸ್ಮರಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.