ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ ಖರ್ಗೆ ಕೋರ್ಟ್ ಗೆ ಹೋಗಲಿ: ಸ್ವಾಮಿ ಸಲಹೆ
ರಾಫೆಲ್ ಒಪ್ಪಂದದ ಕುರಿತು ಸಿಎಜಿ ವರದಿ ಸಂಸತ್ತಿನಲ್ಲಿ ಎಂದು ಮಂಡನೆಯಾಗಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

Published On :
ನವದೆಹಲಿ: ರಾಫೆಲ್ ಒಪ್ಪಂದದ ಕುರಿತು ಸಿಎಜಿ ವರದಿ ಸಂಸತ್ತಿನಲ್ಲಿ ಎಂದು ಮಂಡನೆಯಾಗಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ, " ಖರ್ಗೆ ಅವರಿಗೆ ಸಿಎಜಿ ವರದಿ ಸಿಕ್ಕಿಲ್ಲವೆಂದಾದರೆ, ಕೋರ್ಟ್ ನಲ್ಲಿ ಅದನ್ನೇ ಹೇಳಿ ಪ್ರಮಾಣಪತ್ರ ಅಥವಾ ಮರುಪರಿಶೀಲನಾ ಅರ್ಜಿ ಸಲ್ಲಿಸಲಿ ಎಂದು ಹೇಳಿದ್ದಾರೆ.
"ಮಲ್ಲಿಕಾರ್ಜುನ ಅವರಿಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ, "ನನಗೆ ಸಿಎಜಿ ವರದಿ ಸಿಕ್ಕಿಲ್ಲ, ಸಾರ್ವಜನಿಕ ಲೆಕ್ಕ ಸಮಿತಿಯೂ ಸಿಎಜಿ ವರದಿಯನ್ನು ಪರಿಶೀಲನೆ ಮಾಡಿಲ್ಲ ಎಂದು ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಿ" ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtMallikarjun khargeಸುಪ್ರೀಂ ಕೋರ್ಟ್Subramanian Swamyಮಲ್ಲಿಕಾರ್ಜುನ ಖರ್ಗೆಸುಬ್ರಹ್ಮಣಿಯನ್ ಸ್ವಾಮಿCAGಸಿಎಜಿರಾಫೆಲ್ ತೀರ್ಪುRafale verdict
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


