ದೇಶ

ತೆಲಂಗಾಣ ಚುನಾವಣೆ: ನೂತನ ಸದನದಲ್ಲಿನ 73 ಶಾಸಕರು ಕ್ರಿಮಿನಲ್ ಹಿನ್ನೆಲೆಯವರು

ಇತ್ತೀಚಿಗೆ ಮುಕ್ತಾಯಗೊಂಡ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತಗೊಂಡ 119 ಶಾಸಕರಲ್ಲಿ 73 ಕ್ಕೂ ಹೆಚ್ಚು ಶಾಸಕರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ.

ತೆಲಂಗಾಣ ಚುನಾವಣೆ: ನೂತನ ಸದನದಲ್ಲಿನ  73 ಶಾಸಕರು ಕ್ರಿಮಿನಲ್ ಹಿನ್ನೆಲೆಯವರು
ಸಾಂದರ್ಭಿಕ ಚಿತ್ರ
Published On :

ಹೈದ್ರಾಬಾದ್ :   ಇತ್ತೀಚಿಗೆ ಮುಕ್ತಾಯಗೊಂಡ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತಗೊಂಡ 119 ಶಾಸಕರಲ್ಲಿ  73 ಕ್ಕೂ ಹೆಚ್ಚು ಶಾಸಕರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ. 

ದೆಹಲಿ ಮೂಲದ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ ವಿಶ್ಲೇಷಣೆಯ ಪ್ರಕಾರ, 47 ಶಾಸಕರ ಮೇಲೆ  ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ  ಪ್ರಕಾರದ ಕ್ರೀಮಿನಲ್  ಕೇಸ್ ಗಳು ದಾಖಲಾಗಿವೆ.

119 ಶಾಸಕರ ಪೈಕಿ 73 ಶಾಸಕರು ತಮ್ಮ ಮೇಲಿನ ಕ್ರಿಮಿನಲ್ ಕೇಸ್ ಗಳನ್ನು ಘೋಷಿಸಿಕೊಂಡಿದ್ದಾರೆ.  2014ರಲ್ಲಿ ಶೇ. 56 ರಷ್ಟು ಮಂದಿ  ತಮ್ಮ ಮೇಲಿನ  ಕ್ರಿಮಿನಲ್ ಕೇಸ್ ಗಳನ್ನು ಘೋಷಿಸಿಕೊಂಡಿದ್ದರು. ಆದರೆ, ಈ ಬಾರಿ  ಶೇ, 67 ರಷ್ಟು ಮಂದಿ ತಮ್ಮ  ವಿರುದ್ಧದ ಅಪರಾಧ ಪ್ರಕರಣಗಳನ್ನು ಬಹಿರಂಗಪಡಿಸಿಕೊಂಡಿದ್ದಾರೆ.

2014ರ ಚುನಾವಣೆ ಸಂದರ್ಭದಲ್ಲಿ ಕೊಲೆ ಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ ಪ್ರಕರಣಗಳ ಬಗ್ಗೆ   ಶೇ. 40 ರಷ್ಟು ಮಂದಿ ಘೋಷಿಸಿಕೊಂಡಿದ್ದರು. ಆದರೆ. ಈ ಬಾರಿ ಶೇ.47 ರಷ್ಟು ಇಂತಹ ಅಪರಾಧಗಳ ಬಗ್ಗೆ ಬಹಿರಂಗಪಡಿಸಿಕೊಂಡಿದ್ದಾರೆ  ಎಂದು ಎಡಿಆರ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.