ದೇಶ

ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ

ಇಂಗ್ಲೀಷ್ ಭಾಷೆಯ ಹೆಸರಾಂತ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಈ ಸಾಲಿನ ಜ್ಞಾನ ಪೀಠ ಪ್ರಶಸ್ತಿ ಒಲಿದುಬಂದಿದೆ.

ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ
Amitav Ghosh
Published On :
ನವದೆಹಲಿ: ಇಂಗ್ಲೀಷ್ ಭಾಷೆಯ ಹೆಸರಾಂತ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಈ ಸಾಲಿನ ಜ್ಞಾನ ಪೀಠ ಪ್ರಶಸ್ತಿ ಒಲಿದುಬಂದಿದೆ. 
ಸಾಹಿತ್ಯ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಡಿ.14 ರಂದು  ಜ್ಞಾನಪೀಠ ಪ್ರಶಸ್ತಿ ಸಮಿತಿ ಅವಿರೋಧವಾಗಿ  ಅಮಿತಾವ್ ಘೋಷ್ ಗೆ  ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಿದೆ. 54 ನೇ  ಜ್ಞಾನಪೀಠವನ್ನು ಪಡೆಯುತ್ತಿರುವ ಅಮಿತಾವ್ ಘೋಷ್ ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ. 
ದಿ ಸರ್ಕಲ್ ಆಫ್ ರೀಸನ್, ದಿ ಕಲ್ಕತ್ತಾ ಕ್ರೋಮೋಸೋಮ್, ರಿವರ್ ಆಫ್ ಸ್ಮೋಕ್ ಮುಂತಾದ ಖ್ಯಾತ ಕಾದಂಬರಿಗಳನ್ನು ಅಮಿತಾವ್ ಘೋಷ್ ರಚಿಸಿದ್ದಾರೆ. 
ಸೀ ಆಫ್ ಪೊಪ್ಪೀಸ್, ರಿವರ್ ಆಫ್ ಸ್ಮೋಕ್ ಕೃತಿಗಳು ಅನುಕ್ರಮವಾಗಿ 2008, 2012 ರಲ್ಲಿ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದವು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.