ದೇಶ

ಆರ್'ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ

ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್'ನ ನೂತನ ಗವರ್ನರ್ ಆಗಿ ಮಾಜಿ ಐಎಎಸ್ ಅಧಿಕಾರಿ ಶಕ್ತಿಕಾಂತ್ ದಾಸ್ (61) ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ...

ಆರ್'ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ
ಶಕ್ತಿಕಾಂತ್ ದಾಸ್
Published On :
ನವದೆಹಲಿ: ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್'ನ ನೂತನ ಗವರ್ನರ್ ಆಗಿ ಮಾಜಿ ಐಎಎಸ್ ಅಧಿಕಾರಿ ಶಕ್ತಿಕಾಂತ್ ದಾಸ್ (61) ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. 

ಈ ಮೂಲಕ ತೆರವಾಗಿದ್ದ ಸ್ಥಾನವನ್ನು ಕೇವಲ ಒಂದೇ ದಿನದಲ್ಲಿ ಭರ್ತಿ ಮಾಡುವ ಮೂಲಕ ಪಟೇಲ್ ನೀಡಿದ್ದ ಆಘಾತವನ್ನು ಸರಿಪಡಿಸುವ ಯತ್ನವನ್ನು ಕೇಂದ್ರ ಮಾಡಿದೆ. 

ಊರ್ಜಿತ್ ಪಟೇಲ್ ರಾಜೀನಾಮೆಂಯಿಂದಾಗಿ ತೆರವಾಗಿದ್ದ ಹುದ್ದೆಂಗೆ ಕೂಡಲೇ ಹಂಗಾಮಿ ಗವರ್ನರ್ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳು ಇದ್ದವಾದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಕುರಿತು ಸಂಪುಟ ಸಮಿತಿಯು, ಮಂಗಳವಾರವೇ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿತು. 

ತಮಿಳುನಾಡು ಮೂಲದ 1980ನೇ ಬ್ಯಾಚ್'ನ ಐಎಎಸ್ ಅಧಿಕಾರಿಯಾಗಿದ್ದ ದಾಸ್ ಅವರನ್ನು 2014ರಲ್ಲಿ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಣಕಾಸು ಸಚಿವಾಲಯಕ್ಕೆ ತರಲಾಗಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣ ಘೋಷಿಸಿದ ಬಳಿಕ ದೇಶದಾದ್ಯಂತ ಉಂಟಾಗಿದ್ದ ನೋಟಿನ ಕೊರತೆ ಮತ್ತು ಇತರೆ ಹಣಕಾಸಿನ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಹೊಣೆಯನ್ನು ಸರ್ಕಾರ ದಾಸ್'ಗೆ ವಹಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.