ದೇಶ

ತೆಲಂಗಾಣ: 51 ಸಾವಿರ ಮತಗಳ ಅಂತರದಿಂದ ಕೆಸಿಆರ್ ಗೆಲುವು

ಅವಧಿಗೂ ಮುನ್ನ ತೆಲಂಗಾಣ ವಿಧಾಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದ ಹಂಗಾಮಿ ಮುಖ್ಯಮಂತ್ರಿ ಹಾಗೂ ಟಿಆರ್ ಎಸ್...

ತೆಲಂಗಾಣ: 51 ಸಾವಿರ ಮತಗಳ ಅಂತರದಿಂದ ಕೆಸಿಆರ್ ಗೆಲುವು
ಕೆಸಿಆರ್
Published On :
ಹೈದರಾಬಾದ್: ಅವಧಿಗೂ ಮುನ್ನ ತೆಲಂಗಾಣ ವಿಧಾಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದ ಹಂಗಾಮಿ ಮುಖ್ಯಮಂತ್ರಿ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಗಜ್ವೇಲ್‌ ಕ್ಷೇತ್ರದಲ್ಲಿ 51, 515 ಮಂತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕೆಸಿಆರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಂಟೇರು ಪ್ರತಾಪ ರೆಡ್ಡಿ ವಿರುದ್ಧ 51, 515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 19,366 ಮತಗಳಿಂದ ವಂಟೇರು ವಿರುದ್ಧ ಗೆದ್ದಿದ್ದ ಕೆಸಿಆರ್ ಅವರು ಈ ಸಲ ಭಾರಿ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ. 
ತೆಲಂಗಾಣ ರಾಜ್ಯ ರಚನೆಗೂ ಮುನ್ನ ಸಿದ್ದಿಪೇಟೆ, ಕರೀಂನಗರದಿಂದ ಸ್ಪರ್ಧಿಸುತ್ತಿದ್ದ ಕೆಸಿಆರ್ ಅವರು 2014ರಲ್ಲಿ ಮೊದಲ ಬಾರಿಗೆ ಗಜ್ವೇಲ್‌ನಿಂದ ಕಣಕ್ಕಿಳಿದಿದ್ದರು.
ತೆಲಂಗಾಣದ ಒಟ್ಟು 119 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಸಿಆರ್ ನೇತೃತ್ವದ ಟಿಆರ್ ಎಸ್ 86 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಕೆಸಿಆರ್ ಅವರು ನಾಳೆ ಎರಡನೇ ಬಾರಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.