ದೇಶ

ಆಟೋ ಚಾಲಕನೊಂದಿಗೆ ಚೌಕಾಶಿ ಮಾಡಿದ ಬ್ಯಾಂಕ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ

ಆಟೋ ಚಾಲಕನೊಂದಿಗೆ ಚೌಕಾಶಿ ಮಾಡಿದ ಬ್ಯಾಂಕ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆಟೋ ಚಾಲಕನೊಂದಿಗೆ ಚೌಕಾಶಿ ಮಾಡಿದ ಬ್ಯಾಂಕ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ
ಸಾಂದರ್ಭಿಕ ಚಿತ್ರ
Published On :
ಚೆನ್ನೈ: ಆಟೋ ಚಾಲಕನೊಂದಿಗೆ ಚೌಕಾಶಿ ಮಾಡಿದ ಬ್ಯಾಂಕ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
23 ವರ್ಷದ ಬ್ಯಾಂಕ್ ಉದ್ಯೋಗಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನ ಕುಂಬಕೋಣಂ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆಯು ಮೂಲತಃ ದೆಹಲಿಯವರಾಗಿದ್ದು, ಕುಂಬಕೋಣಂಗೆ ಕೆಲಸ ನಿಮಿತ್ತ ಬಂದಿದ್ದರು. ಬಳಿಕ ಕೆಲಸ ಮುಗಿಸಿ ತಡವಾಗಿ ಹೊರಟಿದ್ದಾರೆ. ಈ ವೇಳೆ ಆಟೋ ಹತ್ತಿದ್ದ ಅವರನ್ನು ಹೆಚ್ಚುವರಿ ಹಣ ನೀಡುವಂತೆ ಆಟೋ ಚಾಲಕ ಕೇಳಿದ್ದಾನೆ.
ಆದರೆ ಸಂತ್ರಸ್ಥೆ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದು, ಈ ವೇಳೆ ಯುವತಿ ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದಿದೆ. ಬಳಿಕ ಆಕ್ರೋಶಿತ ಆಟೋ ಚಾಲಕ ಆಕೆಯನ್ನು ಕತ್ತಲಿನಲ್ಲಿ ನಡುರಸ್ತೆಯಲ್ಲೇ ಬಿಟ್ಟು  ಹೋಗಿದ್ದಾನೆ. ಆತ್ತ ಆಟೋ ಚಾಲಕ ತೆರಳುತ್ತಿದ್ದಂತೆಯೇ ಇತ್ತ ನಾಲ್ವರು ದುಷ್ಕರ್ಮಿಗಳು ಅಲ್ಲಿದೆ ಬಂದು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರವೆಸಗಿದ್ದಾರೆ.
ಘಟನೆಯಿಂದ ಆಘಾತಗೊಂಡ ಸಂತ್ರಸ್ಥೆ ಭಯಗೊಂಡಿದ್ದು ಈ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಈ ಬಗ್ಗೆ ಅವರ ಸಹೋದ್ಯೋಗಿಗಳಿಗೆ ತಿಳಿದಿದ್ದು, ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.  ದೂರು ಸ್ವೀಕರಿಸಿದ ಪೊಲೀಸರು ವಿಚಾರಣೆ ನಡೆಸಿ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಕೋರ್ಟ್ ಡಿಸೆಂಬರ್ 20ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಆರೋಪಿಗಳ ಪರ ವಕಾಲತ್ತು ವಹಿಸಿಕೊಳ್ಳದಂತೆ ವಕೀಲರ ನಿರ್ಧಾರ
ಇನ್ನು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಆರೋಪಿಗಳ ವಿರುದ್ಧ ಯಾವುದೇ ವಕೀಲರೂ ವಕಾಲತ್ತು ವಹಿಸಿಕೊಳ್ಳದಂತೆ ತಮಿಳುನಾಡು ವಕೀಲರ ಸಂಘ ನಿರ್ಧರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.