ಜಮ್ಮು-ಕಾಶ್ಮೀರ: ಕಿಸ್ತ್ ವಾರ್ ನಲ್ಲಿ ಹಿಜ್ಬುಲ್ ಸಂಘಟನೆಯ ಉಗ್ರನ ಸೆರೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ತಳ್ಳುತ್ತಿದ್ದ ಹಿಜ್ಬುಲ್ ಮುಜಹಿದ್ದೀನ್ ಸಂಘಟನೆ ಉಗ್ರನೊಬ್ಬನ್ನು ಕಿಸ್ತ್ ವಾರ್ ಜಿಲ್ಲೆಯಲ್ಲಿ ಇಂದು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು :ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ತಳ್ಳುತ್ತಿದ್ದ ಹಿಜ್ಬುಲ್ ಮುಜಹಿದ್ದೀನ್ ಸಂಘಟನೆ ಉಗ್ರನೊಬ್ಬನ್ನು ಕಿಸ್ತ್ ವಾರ್ ಜಿಲ್ಲೆಯಲ್ಲಿ ಇಂದು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಉಗ್ರ ಮೊಹಮ್ಮದ್ ಆಮಿನ್ ಅಲಿಯಾಸ್ ಜಂಹಗೀರ್ ಎಂಬವರ ಸಹಚರರಾಗಿದ್ದ ಸೌಂದರ್ ದಚ್ಚನ್ ಗ್ರಾಮದ ನಿವಾಸಿ ರಿಯಾಜ್ ಅಹ್ಮದ್ ಬಂಧಿಸಲಾಗಿದೆ ಎಂದು ಕಿಸ್ತ್ ವಾರ್ ಹಿರಿಯ ಪೊಲೀಸ್ ಸೂಪರಿಟೆಂಡೆಂಟ್ ರಾಜಿಂದರ್ ಗುಪ್ತಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇತ್ತೀಚಿಗೆ ಈತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಎಕೆ ಅಸಾಲ್ಟ್ ರೈಪಲ್ ಚಿತ್ರಗಳು ವೈರಲ್ ಆಗಿದ್ದವು. ಜುಲೈ 1 ರಲ್ಲಿ ಬಂಧಿಸಲಾಗಿದ್ದ ಈತನ ಇಬ್ಬರು ಸಹಚರರ ವಿಚಾರಣೆ ವೇಳೆಯಲ್ಲಿ ಅಹ್ಮದ್ ಹೆಸರನ್ನು ಬಾಯ್ಬಿಟ್ಟಿದ್ದರು. ಆತನ ಇಬ್ಬರು ಸಹಚರರ ಬಂಧನದ ಹಿನ್ನೆಲೆಯಲ್ಲಿ ಕಿಸ್ತ್ ವಾರ್ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


