ಬೆಂಗಳೂರು: ಪಾನಮತ್ತ ಮಹಿಳೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವು
ಪಾನಮತ್ತ 25 ವರ್ಷದ ಕೊಲಂಬಿಯಾ ಮಹಿಳೆ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಹಳೆ ಮದ್ರಾಸ್ ರಸ್ತೆಯಲ್ಲಿ ಇಂದು ನಡೆದಿದೆ

ಬೆಂಗಳೂರು: ಪಾನಮತ್ತ 25 ವರ್ಷದ ಕೊಲಂಬಿಯಾ ಮಹಿಳೆ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಹಳೆ ಮದ್ರಾಸ್ ರಸ್ತೆಯಲ್ಲಿ ಇಂದು ನಡೆದಿದೆ. ಮಹಡಿ ಮೇಲೆ ಹಾಕಲಾಗಿದ್ದ ಬಟ್ಟೆ ತರಲು ಹೋದ ವೇಳೆ ಆಯಾತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರೇನಾ ಡ್ಯಾನಿಯಲ್ ( 25 ) ಮೃತ ಮಹಿಳೆ. ಕಳೆದ ನಾಲ್ಕುವರ್ಷಗಳಿಂದಲೂ ಇಂದಿರಾನಗರದ ಖಾಸಗಿ ರೆಸ್ಟೋರೆಂಟ್ ವೊಂದರಲ್ಲಿ ಟ್ರಾನ್ಸ್ ಲೆಟರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಅವರು ಹೇಳಿದ್ದಾರೆ.
ಶನಿವಾರ ರಾತ್ರಿ ವೈಟ್ ಪೀಲ್ಡ್ ನಲ್ಲಿ ಕ್ರಿಸ್ ಮಸ್ ಪೂರ್ವವಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕರೆನಾ ಹಾಗೂ ಆಕೆಯ ಸ್ನೇಹಿತೆ ಮರಿಯಾ ಮದ್ಯ ಸೇವಿಸಿದ್ದರು. ನಂತರ ಅವರ ಬೆಳಗಿನ ಮುಂಜಾನೆ 3 ಗಂಟೆ ಸುಮಾರಿಗೆ ತಾವು ತಂಗಿದ್ದ ಅಪಾರ್ಟ್ ಮೆಂಟ್ ಗೆ ವಾಪಾಸ್ಸಾಗಿದ್ದರು. ಈ ಮಧ್ಯೆ ಮಹಡಿ ಮೇಲೆ ಹಾಕಲಾಗಿದ್ದ ಬಟ್ಟೆ ತರಲು ಬಂದಾಗ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡು ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಯಿತು. ಕರೆನಾ ಪೋಷಕರು ಇನ್ನೂ ಬೆಂಗಳೂರಿಗೆ ಬಂದಿಲ್ಲ. ವಿಚಾರಣೆ ಅಂಗವಾಗಿ ಮರಣೋತ್ತರ ಪರೀಕ್ಷೆ ನಡೆಸಿರುವುದಾಗಿ ಪೊಲೀಸರು ಕೊಲಂಬಿಯಾ ರಾಯಬಾರಿಗೆ ತಿಳಿಸಿದ್ದಾರೆ.
ಕರೆನಾ ಹೆಚ್ಚಾಗಿ ಮದ್ಯ ಸೇವಿಸಿದ್ದರಿಂದ ಸಮತೋಲನ ತಪ್ಪಿದ್ದಾಳೆ. ಮಹಡಿ ಮೇಲೆ ಅಳವಡಿಸಲಾಗಿರುವ ಗ್ರೀಲ್ ಗಳು ಎತ್ತರವಿಲ್ಲದಿರುವುದರಿಂದ ಆಕೆ ಸಾವಿಗೆ ಮತ್ತೊಂದು ಕಾರಣವಾಗಿದೆ ಎಂದು ಆಕೆಯ ಸ್ನೇಹಿತೆಯರು ಹೇಳಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳನ್ನು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


