ದೇಶ

ಉತ್ತರ ಪ್ರದೇಶ: ದಲಿತ ಹೇಳಿಕೆ ಬೆನ್ನಲ್ಲೇ ಹನುಮಂತನ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ!

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಮಾಯಣದ ಹನುಮಂತ ದಲಿತನಾಗಿದ್ದ ಎಂದು ಹೇಳಿದ್ದೇ ತಡ, ಹನುಮಂತನ ಜಾತಿಯ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ.

ಉತ್ತರ ಪ್ರದೇಶ:  ದಲಿತ ಹೇಳಿಕೆ ಬೆನ್ನಲ್ಲೇ ಹನುಮಂತನ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ!
ಉತ್ತರ ಪ್ರದೇಶ: ದಲಿತ ಹೇಳಿಕೆ ಬೆನ್ನಲ್ಲೇ ಹನುಮಂತನ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ!
Published On :
ವಾರಾಣಸಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಮಾಯಣದ ಹನುಮಂತ ದಲಿತನಾಗಿದ್ದ ಎಂದು ಹೇಳಿದ್ದೇ ತಡ, ಹನುಮಂತನ ಜಾತಿಯ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಈ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಹನುಮಂತನ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. 
ಶಿವಪಾಲ್ ಯಾದವ್ ಅವರ ಪ್ರಗತಿಶೀಲ್ ಸಮಾಜವಾದಿ ಪಕ್ಷ (ಲೋಹಿಯಾ) ಪಕ್ಷ ಜಿಲ್ಲಾಡಳಿತಕ್ಕೆ ಹನುಮಂತನ ಜಾತಿಯ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ಒಂದು ವಾರದಲ್ಲಿ ಜಿಲ್ಲಾಡಳಿತ ಪ್ರಮಾಣಪತ್ರ ನೀಡಲು ವಿಫಲವಾದರೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ. 
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೇ ಹನುನಂತನನ್ನು ದಲಿತ ಎಂದು ಹೇಳಿದ್ದರು. ನಾವು ಭಗವಾನ್ ಹನುನಂತನ ಜಾತಿ ಪ್ರಮಾಣಪತ್ರಕ್ಕಾಗಿ ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಭಗವಾನ್ ನ್ನು ಕ್ಷುಲ್ಲಕ ಜಾತಿ ರಾಜಕಾರಣಕ್ಕೆ ಎಳೆದು ತಂದಿದ್ದಾರೆ. ಆದ್ದರಿಂದ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಪಿಎಸ್ ಪಿಎಲ್ ಯುವಮೋರ್ಚಾದ ಜಿಲ್ಲಾಅಧ್ಯಕ್ಷ ಹರೀಶ್ ಮಿಶ್ರಾ ಹೇಳಿದ್ದಾರೆ.
ಹನುಮಂತನ ಫೋಟೊ ಹಾಗೂ ಆತನ ತಂದೆ ಮಹಾರಾಜ್ ಕೇಸರಿ ಹಾಗೂ ತಾಯಿ ಅಂಜನಾ ದೇವಿ ಎಂಬ ಮಾಹಿತಿ ನೀಡಲಾಗಿದ್ದು, ಸಂಕಟ್ ಮೋಚನ ದೇವಾಲಯ ಆತನ ನಿವಾಸವೆಂದು ಅರ್ಜಿಯಲ್ಲಿ ನಮೂದಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.