ಸೋನಿಯಾ,ರಾಹುಲ್ ವಿರುದ್ಧ ಐಟಿ ಪ್ರಕರಣ: ಸುಪ್ರೀಂನಲ್ಲಿ ಸರ್ಕಾರಕ್ಕೆ ಜಯ-ಪ್ರಧಾನಿ ಮೋದಿ
ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ, ಹಾಗೂ ರಾಹುಲ್ ಗಾಂಧಿ ವಿರುದ್ಧದ ಐಟಿ ಪ್ರಕರಣಗಳ ಪುನರ್ ಆರಂಭಕ್ಕೆ...

ಪಾಲಿ: ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ, ಹಾಗೂ ರಾಹುಲ್ ಗಾಂಧಿ ವಿರುದ್ಧದ ಐಟಿ ಪ್ರಕರಣಗಳ ಪುನರ್ ಆರಂಭಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ ಬೆನ್ನಲ್ಲೇ ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ತಾನದ ಪಾಲಿ ಜಿಲ್ಲೆಯ ಸುಮೆರ್ ಪುರದಲ್ಲಿಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರಕ್ಕೆ ಜಯ ದೊರಕಿದ್ದು, ಚಾಯ್ ವಾಲಾನ ಧೈರ್ಯ ಮೆಚ್ಚಬೇಕು ಎಂದರು.
ಗಾಂಧಿ ಕುಟುಂಬ ನಾಲ್ಕು ತಲೆಮಾರಿನಿಂದಲೂ ಸವಲತ್ತುಗಳನ್ನು ಪಡೆದು ಖುಷಿ ಅನುಭವಿಸುತ್ತಿದ್ದು, ಅವರ ವಿರುದ್ಧದ ಐಟಿ ಪ್ರಕರಣಗಳ ಪುನರ್ ಆರಂಭಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಪ್ರಾಮಾಣಿಕತೆಗೆ ಸಂದ ಜಯ ಎಂದು ಮೋದಿ ಹೇಳಿದರು.
ನಾಲ್ಕು ತಲೆಮಾರಿನಿಂದ ದೇಶವನ್ನು ಆಳಿದವರು, ನ್ಯಾಯಾಲಯದ ಬಾಗಿಲಲ್ಲಿ ನಿಲ್ಲುವಂತಾಗಿದೆ. ಈಗ ಹೇಗೆ ತಪ್ಪಿಸಿಕೊಳ್ಳುತ್ತೀರಾ ಎಂಬುದನ್ನು ನೋಡುತ್ತೇನೆ. ಚಾಯ್ ವಾಲಾನ ಧೈರ್ಯ ನೋಡುತ್ತೀರಿ ಎಂದು ನರೇಂದ್ರ ಮೋದಿ ಹೇಳಿದರು.
2011-12ರಲ್ಲಿನ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧದ ತೆರಿಗೆಗೆ ಸಂಬಂಧಿಸಿದ ಪ್ರಕರಣದ ಪುನರ್ ಆರಂಭಕ್ಕೆ ಆದಾಯ ತೆರಿಗೆ ಇಲಾಖೆಗೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


