ದೇಶ

ರಾಜೀವ್ ಗಾಂಧಿ ಭಾಷಣ ಅಣಕಿಸಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಹಳೆ ಭಾಷಣವನ್ನು ಅಣಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ರೈತರ ಸಮಸ್ಯೆಗಳ ಬಗ್ಗೆ....

ರಾಜೀವ್ ಗಾಂಧಿ ಭಾಷಣ ಅಣಕಿಸಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ನರೇಂದ್ರ ಮೋದಿ, ರಾಜೀವ್ ಗಾಂಧಿ
Published On :
ಜೈಪುರ್: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಹಳೆ ಭಾಷಣವನ್ನು ಅಣಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ರೈತರ ಸಮಸ್ಯೆಗಳ ಬಗ್ಗೆ ಗಾಂಧಿ ಕುಟುಂಬಕ್ಕೆ ಹೆಚ್ಚು ಗೊತ್ತಿಲ್ಲ ಎಂದು ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಇಂದು ರಾಜಸ್ಥಾನದ ಹನುಮಗಢದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾಮದಾರಿಗಳು( ಗಾಂಧಿ ಕುಟುಂಬ) ಹಸಿರು ಮೆಣಸಿನಕಾಯಿಗಿಂತ ಕೆಂಪು ಮಣಿಸಿನಕಾಯಿ ಬೆಲೆ ಹೆಚ್ಚು ಎಂದು ಹೇಳುತ್ತಿದ್ದಾರೆ. ಆದರೆ ಹಸಿರು ಮೆಣಸಿನಿಕಾಯಿ ಮತ್ತು ಕೆಂಪು ಮೆಣಿಸಿನಕಾಯಿ ನಡುವಿನ ವ್ಯತ್ಯಾಸ ಗೊತ್ತಿಲ್ಲದ ನಾಮದಾರಿಗಳು ಈಗ ನಮಗೆ ರೈತರ ಬಗ್ಗೆ ಪಾಠ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ರೈತರ ಇಂದಿನ ಕೆಟ್ಟ ಸ್ಥಿತಿಗೆ ಗಾಂಧಿ ಕುಟುಂಬವನ್ನು ದೂರಿದ ಪ್ರಧಾನಿ, ರೈತರ ಕೆಟ್ಟ ಸ್ಥಿತಿಗೆ 70 ವರ್ಷಗಳ ಕಾಂಗ್ರೆಸ್ ನ ದುರಾಡಳಿತವೇ ಕಾರಣ ಎಂದು ಆರೋಪಿಸಿದರು.
ಈ ಹಿಂದೆ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಜೀವ್ ಗಾಂಧಿ ಅವರು, ಹಸಿರು ಮೆಣಸಿನಕಾಯಿಗಿಂತ ಕೆಂಪು ಮೆಣಿಸಿನಕಾಯಿಗೆ ಬೆಲೆ ಹೆಚ್ಚು. ಹೀಗಾಗಿ ರೈತರು ಏಕೆ ಕೆಂಪು ಮಣಿಸಿನಕಾಯಿ ಬೆಳೆಯಬಾರದು ಎಂದು ಪ್ರಶ್ನಿಸಿದ್ದರು. ಆದರೆ ಹಸಿರು ಮೆಣಸಿನಕಾಯಿಯೇ ಕೆಂಪು ಮೆಣಸಿನಕಾಯಿಯಾಗಿ ಬದಲಾಗುತ್ತೆ ಎಂಬ ಸತ್ಯ ಅವರಿಗೆ ಗೊತ್ತಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.