ದೇಶ

ಭಯೋತ್ಪಾದನೆ ಹತ್ತಿಕ್ಕಲಾಗದಿದ್ದರೆ ನಮ್ಮ ಸಹಾಯ ಕೇಳಿ; ಪಾಕ್'ಗೆ ರಾಜನಾಥ್ ಸಿಂಗ್

ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಾಗರಿದ್ದರೆ, ಪಾಕಿಸ್ತಾನ ಧಾರಾಳವಾಗಿ ಭಾರತದ ಸಹಾಯ ಕೇಳಬಹುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ...

ಭಯೋತ್ಪಾದನೆ ಹತ್ತಿಕ್ಕಲಾಗದಿದ್ದರೆ ನಮ್ಮ ಸಹಾಯ ಕೇಳಿ; ಪಾಕ್'ಗೆ ರಾಜನಾಥ್ ಸಿಂಗ್
ಗೃಹ ಸಚಿವ ರಾಜನಾಥ್ ಸಿಂಗ್
Published On :
ಜೈಪುರ: ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಾಗರಿದ್ದರೆ, ಪಾಕಿಸ್ತಾನ ಧಾರಾಳವಾಗಿ ಭಾರತದ ಸಹಾಯ ಕೇಳಬಹುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 
ರಾಜಸ್ಥಾನವದ ಜೈಪುರದಲ್ಲಿ ಮಾತನಾಡಿರುವ ಅವರು, ನಾನು ಪಾಕಿಸ್ತಾನ ಪ್ರಧಾನಮಂತ್ರಿಗಳಿಗೆ ಹೇಳ ಬಯಸುವುದೇನೆಂದರೆ, ಅಫ್ಘಾನಿಸ್ತಾನ, ಅಮೆರಿಕಾದ ಸಹಾಯವನ್ನು ಪಡೆದುಕೊಂಡು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಅದೇ ರೀತಿ ಪಾಕಿಸ್ತಾನಕ್ಕೂ ಭಯೋತ್ಪಾದನೆ ನಿಗ್ರಹಿಸಲು ಕಷ್ಟ ಎನಿಸಿದರೆ ಭಾರತದ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ಭಯೋತ್ಪಾದನಾ ದಾಳಿಯೇ ನಡೆದಿಲ್ಲ ಎಂದು ನಾನು ಹೇಳುವುದಿಲ್ಲ ಆದರೆ, ಭಾರತದಲ್ಲಿ ಯಾವುದೇ ರೀತಿ ದೊಡ್ಡ ಭಯೋತ್ಪಾದನಾ ದಾಳಿಗಳು ನಡೆದಿಲ್ಲ. ಪ್ರವಾಸೋದ್ಯಮದ ಸ್ವರ್ಗವಾಗಿರುವ ಕಾಶ್ಮೀರದಲ್ಲೂ ಪರಿಸ್ಥಿತಿ ಸುಧಾರಿಸುತ್ತಿದೆ. ಸರ್ಕಾರ ಆ ರಾಜ್ಯವನ್ನು ರಾಜಕೀಯ ಪ್ರಕ್ರಿಯೆಗೆ ತರುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಅಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 
ನಕ್ಸಲ್ ದಾಳಿಗಳು ಶೇ.50-60 ರಷ್ಟು ಕಡಿಮೆಯಾಗಿದೆ. 90 ಜಿಲ್ಲೆಗಳ ಪೈಕಿ 8-9 ಜಿಲ್ಲೆಗಳಲ್ಲಿ ನಕ್ಸಲರ ದಾಳಿಗಳಾಗುತ್ತಿವೆ. ಮುಂದಿನ 3-5 ವರ್ಷಗಳಲ್ಲಿ ಈ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.