ದೇಶ

ಇಸಿಸ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರ ವಿದ್ಯಾರ್ಥಿ ಬಂಧನ

ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಯನ್ನು ಆತನ ನಿವಾಸದಿಂದಲೇ ಬಂಧಿಸಲಾಗಿದೆ.

ಇಸಿಸ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರ ವಿದ್ಯಾರ್ಥಿ ಬಂಧನ
ಸಂಗ್ರಹ ಚಿತ್ರ
Published On :
ಶ್ರೀನಗರ: ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಯನ್ನು  ಆತನ ನಿವಾಸದಿಂದಲೇ ಬಂಧಿಸಲಾಗಿದೆ.
ಇಹ್ತೆಶಾಂ ಬಿಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ನೋಯ್ಡಾ ಮೂಲದ ವಿವಿಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದ. ಬಳಿಕ ನಿಷೇಧಿತ ಐಸಿಸ್ ಸಂಘಟನೆ ಸೇರಿದ್ದ ಬಿಲಾಲ್ ಹೆತ್ತವರ ಕರೆಗೆ ಓಗೊಟ್ಟು ಮನೆಗೆ ಮರಳಿದ್ದಾರೆ. 
ಬಿಲಾಲ್ ಶ್ರೀನಗರದ ಖನ್ಯಾರ್ ಗ್ರಾಮದ ನಿವಾಸಿಯಾಗಿದ್ದು, ನೋಯ್ಡಾದ ಶಾರದಾ ವಿವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಆದರೆ ಕಳೆದ ಅಕ್ಟೋಬರ್ ಬಳಿಕ ನಾಪತ್ತೆಯಾಗಿದ್ದ. ಕಳೆದ ತಿಂಗಳು ಬಿಲಾಲ್ ಕಪ್ಪು ಬಣ್ಣದ ಧಿರಿಸು ತೊಟ್ಟು, ಶಸ್ತ್ರ ಮತ್ತು ಐಸಿಸ್ ಧ್ವಜ ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಈ ಮಧ್ಯೆ, ಕಾಣೆಯಾಗಿರುವ ತಮ್ಮ ಪುತ್ರನನ್ನು ಹುಡುಕಿಕೊಡುವಂತೆ ಬಿಲಾಲ್‌ನ ಪೋಷಕರು ಪೊಲೀಸರಲ್ಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. 
ಮನೆಗೆ ಮರಳುವಂತೆ ಕುಟುಂಬದ ಸದಸ್ಯರು ಕೈಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಹೆತ್ತವರ ಶವಮಂಚಕ್ಕೆ ೆ ಹೆಗಲು ನೀಡಲಾದರೂ ಮರಳಿ ಬಾ ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಕುಟುಂಬದ ಏಕೈಕ ಗಂಡು ಸಂತಾನವಾಗಿರುವ ತಮ್ಮ ಮಗನನ್ನು ಮರಳಿ ಕಳಿಸುವಂತೆ ಭಯೋತ್ಪಾದಕ ಸಂಘಟನೆಗಳಿಗೂ ಮನವಿ ಮಾಡಿಕೊಂಡಿದ್ದರು. 'ಸ್ವರ್ಗವು ಹೆತ್ತವರ ಕಾಲಡಿಯಲ್ಲಿದೆ ಎಂದು ಹೇಳುತ್ತಿರುವ ನೀವು, ಇದೀಗ ನನ್ನ ಮಗನನ್ನು ಹೆತ್ತವರ ಬಳಿಗೆ ಕಳುಹಿಸಿ ನಮ್ಮೊಂದಿಗೆ ಮತ್ತೆ ಜೀವನ ನಡೆಸಲು ಅನುವು ಮಾಡಿಕೊಡಿ' ಎಂದು ಬಿಲಾಲ್ ನ ತಂದೆ ಮನವಿ ಮಾಡಿಕೊಂಡಿದ್ದರು.
ಇದೀಗ ಹೆತ್ತವರ ಪ್ರಾರ್ಥನೆ ಫಲಿಸಿದೆ. ರವಿವಾರ ಮಧ್ಯಾಹ್ನ ಬಿಲಾಲ್ ಮನೆಗೆ ಮರಳಿದ್ದಾನೆ. ತಕ್ಷಣ ಆತನನ್ನು ಪೊಲೀಸರ ತಂಡ ಬಂಧಿಸಿ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಬಿಲಾಲ್ ನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕುಟುಂಬದ ಹಾಗೂ ಪೊಲೀಸರ ಸಹಾಯದಿಂದ ಓರ್ವ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ಕರೆತರಲಾಗಿದೆ ಎಂದು ಜಮ್ಮು-ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.