ಚೌ ಶವದ ಹುಡುಕಾಟ ಕಾರ್ಯಾಚರಣೆ ಕೈಬಿಡಿ, ಶವ ಸಿಗುವುದಿಲ್ಲ: ಮಾನವ ಶಾಸ್ತ್ರಜ್ಞರು
ಅಂಡಮಾನ್- ನಿಕೋಬಾರ್‌ನಲ್ಲಿನ ಸೆಂಟಿನೆಲ್ ದ್ವೀಪದಲ್ಲಿರುವ ಆದಿವಾಸಿಗಳ ಮತಾಂತರಕ್ಕೆ ಯತ್ನಿಸಿ ಅವರ ಬಾಣದ ದಾಳಿಗೆ ಬಲಿಯಾದ ಅಮೆರಿಕನ್ ಮತ ಪ್ರಚಾರಕ ಜಾನ್ ಅಲೆನ್ ಚೌನ ಶವ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.

Published On :
ನವದೆಹಲಿ: ಅಂಡಮಾನ್- ನಿಕೋಬಾರ್‌ನಲ್ಲಿನ ಸೆಂಟಿನೆಲ್ ದ್ವೀಪದಲ್ಲಿರುವ ಆದಿವಾಸಿಗಳ ಮತಾಂತರಕ್ಕೆ ಯತ್ನಿಸಿ ಅವರ ಬಾಣದ ದಾಳಿಗೆ ಬಲಿಯಾದ ಅಮೆರಿಕನ್ ಮತ ಪ್ರಚಾರಕ ಜಾನ್ ಅಲೆನ್ ಚೌನ ಶವ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.
ಚೌ ಶವದ ಹುಡುಕಾಟ ಕಾರ್ಯಾಚರಣೆಯನ್ನು ಕೂಡಲೇ ಸ್ಥಳೀಯ ಜಿಲ್ಲಾಡಳಿತ ಕೈ ಬಿಡಬೇಕು. ಇದರಿಂದ ಅಪಾಯ ಹೆಚ್ಚು ಎಂದು ಮಾನವ ಶಾಸ್ತ್ಪಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶವದ ಹುಡುಕಾಟದ ಕಾರ್ಯಾಚರಣೆಯಿಂದ ಸೆಂಟಿನೆಲ್ ಬುಡಕಟ್ಟು ನಿವಾಸಿಗಳಿಗೆ ತೊಂದರೆಯಾಗುತ್ತದೆ. ಅವರಿಗೆ ತೊಂದರೆಯಾದರೆ ಖಂಡಿತಾ ಅವರು ಆಕ್ರೋಶಗೊಂಡು ದಾಳಿ ಮಾಡುತ್ತಾರೆ. ಇದರಿಂದ ಅಪಾಯವೇ ಹೆಚ್ಚು ಎಂದು ಮಾನವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಚೌ ಸಾವನ್ನಪ್ಪಿ ಸುಮಾರು 18 ದಿನಗಳೇ ಕಳಿದಿದ್ದು, ಇಷ್ಟು ಹೊತ್ತಿಗಾಗಲೇ ಬುಡುಕಟ್ಟು ನಿವಾಸಿಗಳು ತಮ್ಮದೇ ಆದ ರೀತಿಯಲ್ಲಿ ಶವವನ್ನು ನಿರ್ವಹಿಸಿರುತ್ತಾರೆ. ಹೀಗಾಗಿ ಚೌ ಶವದ ಹುಡುಕಾಟ ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಂಡಮಾನ್ ಅಧಿಕಾರಿಯೊಬ್ಬರು, ಹೊರ ಜಗತ್ತಿನ ಸಂಪರ್ಕಕ್ಕೆ ಬಾರದೇ ಪುಟ್ಟದ್ವೀಪದಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳಿರುವ ಸ್ಥಳಕ್ಕೆ ಹೋಗಿ ಮತ ಪ್ರಚಾರಕ ಜಾನ್ ಅಲೆನ್ ಚಾವು ದೇಹ ತರಬೇಕು. ಆದರೆ ಅದೊಂದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಆ ದ್ವೀಪದ ಸುತ್ತಳತೆಯ 5 ಕಿ.ಮೀ. ಒಳಕ್ಕೆ ಯಾರೂ ಹೋಗಬಾರದು ಎಂಬ ನಿರ್ಬಂಧ ಇರುವುದರಿಂದ ಕಾರ್ಯಾಚರಣೆ ಅಷ್ಟುಸುಲಭವಿಲ್ಲ. ಹೋದರೂ ಆದಿವಾಸಿಗಳು ದಾಳಿ ಮಾಡುತ್ತಾರೆ. ವಿಳಂಬ ಮಾಡಿದರೆ, ತಮ್ಮದೇ ರೀತಿಯಲ್ಲಿ ಶವವನ್ನು ಅಂತ್ಯಸಂಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Andaman and Nicobarಅಂಡಮಾನ್ ಮತ್ತು ನಿಕೋಬಾರ್portblareಪೋರ್ಟ್ ಬ್ಲೇರ್ಸೆಂಟಿನೆಲ್ ದ್ವೀಪSentinel islandJohn Allen Chouಜಾನ್ ಅಲೆನ್ ಚೌ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


