ದೇಶ

ನೋಟು ಬ್ಯಾನ್ ವಿಫಲವಾಗಿದ್ದಕ್ಕೆ ಮೋದಿ ಪ್ರಾಯಶ್ಚಿತ್ತ ಹೇಗೆ: ಶಿವಸೇನೆ ಪ್ರಶ್ನೆ

ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ...

ನೋಟು ಬ್ಯಾನ್ ವಿಫಲವಾಗಿದ್ದಕ್ಕೆ ಮೋದಿ ಪ್ರಾಯಶ್ಚಿತ್ತ ಹೇಗೆ: ಶಿವಸೇನೆ ಪ್ರಶ್ನೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
Published On :
ಮುಂಬೈ: ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಶುಕ್ರವಾರ ಪ್ರಶ್ನಿಸಿದೆ.
ಆರ್‌ಬಿಐ ತನ್ನ 2017-18ರ ಸಾಲಿನ ವಾರ್ಷಿಕ ವರದಿಯಲ್ಲಿ ಅಮಾನ್ಯಗೊಳಿಸಲಾದ 500 ಮತ್ತು 1000 ರು. ನೋಟುಗಳು ಶೇ.99.3ರಷ್ಟು ಪ್ರಮಾಣದ ನೋಟುಗಳು ಬ್ಯಾಂಕ್‌ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ತಿಳಿಸಿದ್ದು, ದೇಶವನ್ನು ಆರ್ಥಿಕ ಅರಾಜಕತೆಗೆ ದೂಡಿದ್ದಕ್ಕೆ ಮೋದಿಗೆ ಯಾವ ಪ್ರಾಯಶ್ಚಿತ್ತವಿದೆ ಎಂದು ಶಿವಸೇನೆ ಕಟುವಾಗಿ ಟೀಕಿಸಿದೆ.
ನೋಟ್ ಬ್ಯಾನ್ ನಿಂದಾಗಿ ದೇಶಕ್ಕೆ ಭಾರಿ ನಷ್ಟವಾಗಿದೆ. ಉದ್ಯಮದ ಮೇಲೂ ಅಮಾನ್ಯೀಕರಣ ಪರಿಣಾಮ ಬೀರಿದ್ದು, ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ನೋಟ್ ಬ್ಯಾನ್ ವೇಳೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ದೇಶದ ಆಡಳಿತಗಾರರೂ ಅಭಿವೃದ್ಧಿ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿಸಿಕೊಳ್ಳುವುದಕ್ಕಾಗಿ ನೋಟ್ ಬ್ಯಾನ್ ಮಾಡಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಿದೆ.
2016, ನವೆಂಬರ್ ನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಉಲ್ಲೇಖಿಸಿರುವ ಸಾಮ್ನಾ, ನನಗೆ 50 ದಿನ(ಡಿಸೆಂಬರ್ 30ರ ವರೆಗೆ) ಸಹಕಾರ ಕೊಡಿ, ನನ್ನ ಉದ್ದೇಶ ತಪ್ಪಾಗಿದ್ದರೆ ನೀವು ಯಾವ ಶಿಕ್ಷೆ ಬೇಕಾದರೂ ಕೊಡಬಹುದು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.