ದೇಶ

ಪ್ರವಾಹ ಪೀಡಿತ ಕೇರಳದಲ್ಲಿ ರಾಹುಲ್: ಭೇಟಿ ವೇಳೆ ಮಾನವೀಯತೆ ಮೆರೆದ ಕಾಂಗ್ರೆಸ್ ಅಧ್ಯಕ್ಷ

ಭೀಕರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಭೇಟಿ ನೀಡಿದ್ದು, ಭೇಟಿ ನವೇಳೆ ರೋಗಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ...

ಪ್ರವಾಹ ಪೀಡಿತ ಕೇರಳದಲ್ಲಿ ರಾಹುಲ್: ಭೇಟಿ ವೇಳೆ ಮಾನವೀಯತೆ ಮೆರೆದ ಕಾಂಗ್ರೆಸ್ ಅಧ್ಯಕ್ಷ
ಪ್ರವಾಹ ಪೀಡಿತ ಕೇರಳದಲ್ಲಿ ಕಾಂಗ್ರೆಸ್ ಅಧ್ಯಕ್ಷ: ಭೇಟಿ ವೇಳೆ ಮಾನವೀಯತೆ ಮೆರೆದ ರಾಹುಲ್
Published On :
ತಿರುವನಂತಪುರ: ಭೀಕರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಭೇಟಿ ನೀಡಿದ್ದು, ಭೇಟಿ ನವೇಳೆ ರೋಗಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 
ಆಲಪ್ಪುಳದ ಚೆಂಗನ್ನೂರು ಕಾಲೇಜು ಹೆಲಿಪ್ಯಾಡ್ ನಲ್ಲಿ ರಾಹುಲ್ ಗಾಂಧಿಯವರು ಆಗಮಿಸಿದ ಸಂದರ್ಭದಲ್ಲಿ ರೋಗಿಯೊಬ್ಬರನ್ನು ಒಯ್ಯಲು ಅದೇ ಸಮಯದಲ್ಲಿ ಏರ್'ಆ್ಯಂಬುಲೆನ್ಸ್ ಬಂದಿದೆ. ಈ ವೇಳೆ ಏರ್ ಆ್ಯಂಬುಲೆನ್ಸ್ ಮೇಲೇರಲು ಬಿಟ್ಟ ರಾಹುಲ್ ಅವರು, ಬಳಿಕ ತಾವು ತೆರಳಿ ಮಾನವೀಯತೆ ಮರೆದಿದ್ದಾರೆ. 
ಹೆಲಿಕಾಪ್ಟರ್ ಏರಲು ಹೊರಟಿದ್ದ ರಾಹುಲ್ ಅವರಿದೆ ಅದೇ ಹೆಲಿಪ್ಯಾಡ್ ನಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ ಏರ್ ಆ್ಯಂಬುಲೆನ್ಸ್ ಕಂಡು ಬಂದಿತ್ತು. ಕೂಡಲೇ ಭದ್ರತಾ ಸಿಬ್ಬಂದಿಗೆ ಇದರ ಬಗ್ಗೆ ವಿಚಾರಿಸಿದ್ದಾರೆ. ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಿದ್ದವಾಗಿ ನಿಂತಿದ್ದ ಹೆಲಕಾಪ್ಟರ್ ಇದು ಎಂದು ತಿಳಿಸಿದ್ದಾರೆ. 

ಈ ವೇಳೆ ಏರ್ ಆ್ಯಂಬುಲೆನ್ಸ್'ಗೆ ಮೊದಲು ಹಾರಾಟಕ್ಕೆ ಅವಕಾಶ ಕೊಟ್ಟು, ಮತ್ತೆ ಹೆಲಿಕಾಪ್ಟರ್ ಬರುವವರೆಗೂ 30 ನಿಮಿಷಗಳ ಕಾಲ ಕಾದು ನಂತರ ಹೆಲಿಕಾಪ್ಟರ್ ಮೂಲಕ ರಾಹುಲ್ ಪ್ರಯಾಣ ಬೆಳೆಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.