ದೇಶ

ವಿಧಿಯಾಟ: ಹಿರಿಯ ಮಗನಂತೆಯೇ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾತಕ್ಕೀಡಾಗಿ ದುರ್ಮರಣ!

ವಿಧಿಯಾಟ ಅಂದರೆ ಇದೇ ಇರಬೇಕೇನೋ. ಮಗನಂತೆ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ...

ವಿಧಿಯಾಟ: ಹಿರಿಯ ಮಗನಂತೆಯೇ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾತಕ್ಕೀಡಾಗಿ ದುರ್ಮರಣ!
ಜೂನಿಯರ್ ಎನ್‍ಟಿಆರ್-ಜಾನಕಿರಾಮ್-ನಂದಮೂರಿ ಹರಿಕೃಷ್ಣ
Published On :
ಹೈದರಾಬಾದ್: ವಿಧಿಯಾಟ ಅಂದರೆ ಇದೇ ಇರಬೇಕೇನೋ. ಮಗನಂತೆ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ. 
2014ರ ಡಿಸೆಂಬರ್ 6ರಂದು ನಂದಮೂರಿ ಹರಿಕೃಷ್ಣ ಅವರ ಹಿರಿಯ ಪುತ್ರ ಜಾನಕಿರಾಮ್ ಸಹ ನಲ್ಗೊಂಡದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಅದೇ ರೀತಿ ಹರಿಕೃಷ್ಣ ಸಹ ನಲ್ಗೊಂಡದ ಹೆದ್ದಾರಿಯ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. 
ಆಂಧ್ರಪ್ರದೇಶದ ನಲ್ಗೊಂಡದ ನಾರ್ಕಟ್ ಪಲ್ಲಿ-ಅದ್ದಂಕಿ ಹೆದ್ದಾರಿ ಹರಿಕೃಷ್ಣ ಕುಟಂಬಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದೇ ಹೆದ್ದಾರಿಯಲ್ಲಿ ಹರಿಕೃಷ್ಣ ಕುಟಂಬದವರಿಗೆ ಅಪಘಾತಗಳಾಗುತ್ತಿವೆ. 2009ರಲ್ಲಿ ಜೂನಿಯರ್ ಎನ್‍ಟಿಆರ್ ಕಾರು ಅಪಘಾತಗೊಂಡು ಜೂನಿಯರ್ ಎನ್‍ಟಿಆರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅವರಿಗೆ ಆಗ ಗಂಭೀರ ಗಾಯಗಳಾಗಿತ್ತು. 
ನಂತರ 2014ರಲ್ಲಿ ಜಾನಕಿರಾಮ್ ಕಾರು ಅಪಘಾತವಾಗಿ ಜಾನಕಿರಾಮ್ ಮೃತಪಟ್ಟಿದ್ದರು. ಅದೇ 2018ರಲ್ಲಿ ನಂದಮೂರಿ ಹರಿಕೃಷ್ಣ ಅವರ ಕಾರು ಅಪಘಾತಗೊಂಡು ದುರ್ಮರಣ ಹೊಂದಿದ್ದಾರೆ. 
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ನಟ ದಿವಂಗತ ನಂದಮೂರಿ ತಾರಕ ರಾಮರಾವ್ ಹಿರಿಯ ಪುತ್ರ ನಟ ನಂದಮೂರಿ ಹರಿಕೃಷ್ಣ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ನಂದಮೂರಿ ಹರಿಕೃಷ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹರಿಕೃಷ್ಣ ಅವರು ಭೀಕರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಮಿನೇನಿ ಆಸ್ಪತ್ರೆಯಲ್ಲಿ ಹರಿಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.