ಸಮಾಜವಾದಿ ಪಕ್ಷ ಅಲ್ಲ ಅದು 'ನಮಾಜ್ ವಾದಿ': ಅಮರ್ ಸಿಂಗ್ ಲೇವಡಿ
: 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೇ ಹೊಣೆ ಎಂದು ರಾಜ್ಯಸಭೆ ಸಂಸದ ...

Published On :
ಲಕ್ನೋ: 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೇ ಹೊಣೆ ಎಂದು ರಾಜ್ಯಸಭೆ ಸಂಸದ ಅಮರ್ ಸಿಂಗ್ ಆರೋಪಿಸಿದ್ದಾರೆ.
2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಅಮರ್ ಸಿಂಗ್ ಘೋಷಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರಂತ ರಾಜಕಾರಣಿಗಳು ಅಜಂ ಖಾನ್ ಅವರಂತ ನಾಯಕರನ್ನು ರೂಪಿಸುತ್ತಾರೆ. ಈ ಕಾರಣದಿಂದ 2013 ರಲ್ಲಿ ನಡೆದಂತ ಘಟನೆಗಳು ನಡೆಯುತ್ತವೆ ಎಂದು ಟೀಕಿಸಿದ್ದಾರೆ.
ಮುಜಾಫರ್ ನಗರ ಗಲಭೆ ಉತ್ತುಂಗದಲ್ಲಿ ದ್ದಾಗ, ಸಮಾಜವಾದಿ ಪಕ್ಷ ಸಾಯ್ ಪೈ ಮಹೋತ್ಸವ ಎಂಜಾಯ್ ಮಾಡುತ್ತಿದ್ದರು ಎಂದು ದೂರಿದ್ದಾರೆ.
ಅಮರ್ ಸಿಂಗ್ ಅವರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಬೇಕು ಹಾಗೂ ಅವರ ಹೆಂಡತಿ ಮತ್ತು ಮಗಳಿಗೆ ಆ್ಯಿಸಿಡ್ ಹಾಕಬೇಕು ಎಂದು ಸಂದರ್ಶನವೊಂದರಲ್ಲಿ ಅಜಂಖಾನ್ ಬೆದರಿಕೆ ಹಾಕಿದ್ದರು. ಹೀಗಾಗಿ ನನ್ನ ಮಗಳು ಶಾಲೆಗೆ ಹೋಗಲು ಹೆದರುತ್ತಿದ್ದಾಳೆ ಎಂದು ಸುದ್ದಿಗೋಷ್ಠಿಯಲ್ಲಿ ಅಮರ್ ಸಿಂಗ್ ಹೇಳಿದ್ದಾರೆ.
ಸಮಾಜವಾದಿ ಪಕ್ಷ ನಮಾಜ್ ವಾದಿಯಾಗುತ್ತಿದೆ ಎಂದು ಅಮರ್ ಸಿಂಗ್ ಲೇವಡಿ ಮಾಡಿದ್ದಾರೆ. ಗುಜರಾತ್ ನಲ್ಲ ನಡೆದರೇ ಅದು ಗಲಭೆಯಾಗುತ್ತದೆ ಎಂದಾದರೇ ಉತ್ತರ ಪ್ರದೇಶದಲ್ಲಿ ನಡೆದದ್ದು ಗಲಭೆಯಲ್ಲವೇ ಎಂದು ಪ್ರಶ್ನಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Samajwadi PartyAmar Singhಅಮರ್ ಸಿಂಗ್Muzaffarnagar riotsಮುಜಾಫರ್ ನಗರ ಗಲಭೆnamaz wadi partyಸಮಾಜ ವಾದಿ ಪಕ್ಷನಮಾಜ್ ವಾದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


