ಗರಿಷ್ಠ ಸ್ಥಾನ ಗಳಿಸಿದ ಪಕ್ಷಕ್ಕೆ ಪ್ರಧಾನಿ ಹುದ್ದೆಗೇರುವ ಹಕ್ಕಿದೆ: ಶರದ್ ಪವಾರ್
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾವು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಎಂದಿರುವುದು "ಸಂತಸದ" ವಿಚಾರ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ನಾಯಕ ಶರದ್ ಪವಾರ್ ಹೇಳಿದ್ದಾರೆ.

Published On :
ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾವು ಪ್ರಧಾನಿ ಹುದ್ದೆ ರೇಸ್ ನಲ್ಲಿಲ್ಲ ಎಂದಿರುವುದು "ಸಂತಸದ" ವಿಚಾರ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ನಾಯಕ ಶರದ್ ಪವಾರ್ ಹೇಳಿದ್ದಾರೆ. 2019 ರ ಚುನಾವಣೆ ನಂತರ ಪಕ್ಷವು ಗರಿಷ್ಠ ಸ್ಥಾನಗಳನ್ನು ಪಡೆಯಲಿದೆ ಎಂದು ಅವರು ಹೇಳಿದರು.
ಚುನಾವಣೆ ನಡೆಯಲಿ, ಈ ಜನರನ್ನು (ಬಿಜೆಪಿ) ಅಧಿಕಾರದಿಂದ ಕೆಳಗಿಳಿಸಲು ನಾವು ಒತ್ತಾಗಿದ್ದೇವೆ.ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತದೆಯೋ ಅವರು ಪ್ರಧಾನಿ ಹುದ್ದೆ ಕೇಳಬಹುದು.ಎಂದು ಪವಾರ್ ಹೇಳಿದ್ದಾರೆ.
"ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾನು ಪ್ರಧಾನಿ ಹುದ್ದೆ ರೇಸ್ ನಲ್ಲಿಲ್ಲ ಎಂದಿರುವುದು ನನಗೆ ಸಂತಸ ತಂದಿದೆ" ಮುಂಬೈನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪವಾರ್ ಹೇಳಿದ್ದಾರೆ.
"ನಾನು ಈ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ.ನಾನು ಸೈದ್ಧಾಂತಿಕ ಹೋರಾಟವನ್ನು ಎದುರು ನೋಡುತ್ತೇನೆ. ಈ ಬದಲಾವಣೆಯು 2014 ರ ನಂತರ ನನ್ನಲ್ಲಿ ಮೂಡಿದೆ. ಭಾರತಕ್ಕೆ ಅಪಾಯವಿದೆ ಎಂದು ನಾನು ಅರಿತುಕೊಂಡಿದ್ದೇನೆ" ರಾಹುಲ್ ಹೇಳಿದ್ದಾರೆ.
2004 ರ ಸಾರ್ವತ್ರಿಕ ಚುನಾವಣೆಯ ನಂತರ ರೂಪುಗೊಂಡ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ 1998 ರಲ್ಲಿ ರಚನೆಯಾದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ ಅನ್ನು ಮಣಿಸಿದ್ದನ್ನು ಪವಾರ್ ನೆನಪಿಸಿದ್ದಾರೆ.
ತಾನು ಪ್ರತಿ ರಾಜ್ಯಕ್ಕೆ ತೆರಳಿ ಬಿಜೆಪಿ ಜತೆ ಇಲ್ಲದ ಪ್ರಾದೇಶಿಕ ಪಕ್ಷಗಳನ್ನು ನಮ್ಮ ಜತೆ ಸೇರಿಕೊಳ್ಳಲು ಹೇಳುತ್ತೇನೆ ಎಂದು ಪವಾರ್ ಹೇಳಿದರು.
ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ, ಅಖಿಲೇಶ್ ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ವಿಭಿನ್ನ ಪರಿಸ್ಥಿತಿ ಇರುವ ಕಾರಣ ನಾವು ಪ್ರತಿ ರಾಜ್ಯದಲ್ಲಿ ಸಹ ಪ್ರಬಲ ಪ್ರಾದೇಶಿಕ ಪಕ್ಷಗಳೊಡನೆ ಸೇರಿಕೊಳ್ಳಬೇಕು ಎಂದು ಪವಾರ್ ಹೇಳಿದ್ದಾರೆ.
ಲೋಕ ಜನಶಕ್ತಿ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿರೋಧ ಪಕ್ಷಗಳು 2019ರ ಚುನಾವಣೆ ಬದಲಿಗೆ 2024ರ ಚುನಾವಣೆ ಕುರಿತು ಯೋಚಿಸಬೇಕು. ಏಕೆಂದರೆ 2019 ರಲ್ಲಿ ಮೋದಿಗೆ ಸವಾಲಾಗಿರುವ ನಾಯಕರೇ ಇಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


