ಜವಹರ್ ಲಾಲ್ ನೆಹರೂ ಸ್ಮಾರಕಕ್ಕೆ ಧಕ್ಕೆ ಮಾಡಬೇಡಿ: ಪ್ರಧಾನಿಗೆ ಮನಮೋಹನ್ ಪತ್ರ!
ಜವಹರ್ ಲಾಲ್ ನೆಹರೂ ಕೇವಲ ಕಾಂಗ್ರೆಸ್ಪಕ್ಷದವರಲ್ಲ, ಬದಲಾಗಿ ಇಡೀ ದೇಶದವರು. ಹೀಗಿರುವಾಗ ತ್ರಿಮೂರ್ತಿ ಭವನಕ್ಕೆ...

Published On :
ನವದೆಹಲಿ: ಜವಹರ್ ಲಾಲ್ ನೆಹರೂ ಕೇವಲ ಕಾಂಗ್ರೆಸ್ಪಕ್ಷದವರಲ್ಲ, ಬದಲಾಗಿ ಇಡೀ ದೇಶದವರು. ಹೀಗಿರುವಾಗ ತ್ರಿಮೂರ್ತಿ ಭವನಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡಬೇಡಿ ಎಂದು ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ತ್ರಿಮೂರ್ತಿ ಭವನ ಪರಿಸರದಲ್ಲಿ ಎಲ್ಲಾ ಪ್ರಧಾನ ಮಂತ್ರಿಗಳ ಸಂಗ್ರಾಹಾಲಯ(ಎನ್ಎಮ್ಎಮ್ಎಲ್) ಸ್ಥಾಪಿಸುವ ಕುರಿತಾಗಿ ಸರ್ಕಾರ ಪ್ರಸ್ತಾಪಿಸಿದಾಗ ಕಾಂಗ್ರೆಸ್ ವಿರೋಧಿಸಿತ್ತು.
ಅಂದಿನಿಂದ ನೆಹರೂ ಸ್ಮಾರಕ ಹಾಗೂ ಸಂಗ್ರಹಾಲಯ ಹಾಗೂ ಗ್ರಂಥಾಲಯವು ಸುದ್ದಿಯಾಗುತ್ತಲೇ ಇದೆ. ಹೀಗೆ ಮಾಡುವುದರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆಹರೂ ಸ್ಮಾರಕಕ್ಕೆ ಧಕ್ಕೆಯಾಗುತ್ತದೆ ಎಂಬುದು ಕಾಂಗ್ರೆಸ್ ಅಭಿಪ್ರಾಯವಾಗಿದೆ.
ಈ ಹಿಂದಿನಿಂದಲೂ ಬಿಜೆಪಿ ನೆಹರೂರವರ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಅರೋಪಿಸುತ್ತಾ ಬಂದಿದೆ. ಸದ್ಯ ಐತಿಹಾಸಿಕ ತ್ರಿಮೂರ್ತಿ ಭವನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ, ಮನಮೋಹನ್ ಸಿಂಗ್ರವರು ಬರೆದಿರುವ ಪತ್ರದಲ್ಲಿ ಸರ್ಕಾರವು ನೆಹರೂರವರ ಕೊಡುಗೆಯನ್ನು ಅಳಿಸಿ ಹಾಕುವ ಯತ್ನ ಮಾಡುತ್ತಿದೆ ಎಂದು ದೂರಿದ್ದಾರೆ.
ದಿವಂಗತ ಪ್ರಧಾನಿ ವಾಜಪೇಯಿಯವರ ಕುರಿತಾಗಿ ಬರೆದಿದ್ದರು. "ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಎನ್ಎಮ್ಎಮ್ಎಲ್ ಹಾಗೂ ತ್ರಿಮೂರ್ತಿ ಭವನ ಪರಿಸರದಲ್ಲಿ ಹಾಗೂ ಚರಿತ್ರೆಯನ್ನು ಬದಲಾಯಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗ ಬದಲಾವಣೆ ತರುವುದು ಭಾರತ ಸರ್ಕಾರದ ಅಜೆಂಡಾ ಆಗಿರುವು ಖೇದಕರ ಸಂಗತಿ" ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿManmohan SinghJawaharlal Nehru memorial complexಮನಮೋಹನ್ ಸಿಂಗ್. ಜವಹರ್ ಲಾಲ್ ನೆಹರು ಸ್ಮಾರಕ ಭವನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


