ಕಾಂಗ್ರೆಸ್ ರ್ಯಾಲಿಯಲ್ಲಿ ಸಿಲುಕಿದ ಆ್ಯಂಬುಲೇನ್ಸ್; ನವಜಾತ ಶಿಶು ಸಾವು, ಕೋಮಾಗೆ ಜಾರಿದ ತಾಯಿ!
ಕಾಂಗ್ರೆಸ್ ಕಾರ್ಯಕರ್ತರ ಸೈಕಲ್ ರ್ಯಾಲಿಯಿಂದಾಗಿ ನವಜಾತ ಶಿಶು ಸಾವನ್ನಪ್ಪಿದ್ದು ತಾಯಿ ಕೋಮಾಗೆ ಜಾರಿರುವ ಹೃದಯವಿದ್ರಾವಕ ಘಟನೆ ಸೋನಿಪತ್ ನಲ್ಲಿ ನಡೆದಿದೆ...

Published On :
ಸೋನಿಪತ್(ಹರಿಯಾಣ): ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸೈಕಲ್ ರ್ಯಾಲಿಯಿಂದಾಗಿ ನವಜಾತ ಶಿಶು ಸಾವನ್ನಪ್ಪಿದ್ದು ತಾಯಿ ಕೋಮಾಗೆ ಜಾರಿರುವ ಹೃದಯವಿದ್ರಾವಕ ಘಟನೆ ಸೋನಿಪತ್ ನಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಮಗುವಿನ ಜನನವಾಗಿತ್ತು. ಆದರೆ ನವಜಾತ ಶಿಶುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಆ್ಯಂಬುಲೇನ್ಸ್ ನಲ್ಲಿ ಸೋನಿಪತ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುವಾಗ ಕಾಂಗ್ರೆಸ್ ನ ಸೈಕಲ್ ರ್ಯಾಲಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ.
ಸೈಕಲ್ ರ್ಯಾಲಿಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ 30 ನಿಮಿಷಗಳ ಕಾಲ ಆ್ಯಂಬುಲೇನ್ಸ್ ರ್ಯಾಲಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರಿಂದ ನವಜಾತ ಶಿಶುವಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿದ್ದು ತಾಯಿ ಕೋಮಾಗೆ ಜಾರಿದ್ದಾರೆ.
ಅಶೋಕ್ ತನ್ವಾರ್ ಹರಿಯಾಣ ಬಜಾವೋ ಪರಿವರ್ತನ್ ಲಾವೋ ಅಭಿಯಾನ ಆರಂಭಿಸಿದ್ದು ಸೈಕಲ್ ರ್ಯಾಲಿಗೆ ಕರೆ ನೀಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 1ನ್ನು ಬ್ಲಾಕ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Haryanaambulanceಹರಿಯಾಣನವಜಾತ ಶಿಶುಆ್ಯಂಬುಲೆನ್ಸ್Congress rallyinfant diesಕಾಂಗ್ರೆಸ್ ರ್ಯಾಲಿCongress Chief Cycle Rallyಕಾಂಗ್ರೆಸ್ ಸೈಕಲ್ ರ್ಯಾಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


