ದೇಶ

ಪುಣೆ: ಗರ್ಲ್ ಫ್ರೆಂಡ್ ಗಾಗಿ 300 ಐ ಆಮ್ ಸಾರಿ ಹೋರ್ಡಿಂಗ್ಸ್ ಹಾಕಿಸಿದ ಪಾಗಲ್ ಪ್ರೇಮಿ!

ಗರ್ಲ್ ಫ್ರೆಂಡ್ ಹಾಗೂ ತನ್ನ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಂಗಾಲಾದ ಪಾಗಲ್ ಪ್ರೇಮಿಯೊಬ್ಬ ಪುಣೆಯ ಪ್ರಮುಖ ರಸ್ತೆಗಳಲ್ಲಿ 300 ಐ ಆಮ್ ಸಾರಿ ಎಂಬ ಹೋರ್ಡಿಂಗ್ ಗಳನ್ನು ಹಾಕಿಸಿದ್ದಾನೆ.

ಪುಣೆ: ಗರ್ಲ್ ಫ್ರೆಂಡ್ ಗಾಗಿ 300 ಐ ಆಮ್ ಸಾರಿ ಹೋರ್ಡಿಂಗ್ಸ್ ಹಾಕಿಸಿದ ಪಾಗಲ್ ಪ್ರೇಮಿ!
ಪುಣೆ: ಗರ್ಲ್ ಫ್ರೆಂಡ್ ಗಾಗಿ 300 ಐ ಆಮ್ ಸಾರಿ ಹೋರ್ಡಿಂಗ್ಸ್ ಹಾಕಿಸಿದ ಪಾಗಲ್ ಪ್ರೇಮಿ!
Published On :
ಪುಣೆ: ಗರ್ಲ್ ಫ್ರೆಂಡ್ ಹಾಗೂ ತನ್ನ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಂಗಾಲಾದ ಪಾಗಲ್ ಪ್ರೇಮಿಯೊಬ್ಬ ಪುಣೆಯ ಪ್ರಮುಖ ರಸ್ತೆಗಳಲ್ಲಿ 300 ಐ ಆಮ್ ಸಾರಿ ಎಂಬ ಹೋರ್ಡಿಂಗ್ ಗಳನ್ನು ಹಾಕಿಸಿದ್ದಾನೆ. 
ಎಂಬಿಎ ವ್ಯಾಸಂಗ ಮಾಡುತ್ತಿರುವ 25 ವರ್ಷದ ನೀಲೇಶ್ ಖೇದ್ಕರ್ ಎಂಬ ವ್ಯಕ್ತಿ ಇಂತಹ ಹುಚ್ಚು ಕೆಲಸ ಮಾಡಿದ್ದು, ಪ್ರೇಮಿಯ ಬಳಿ ಕ್ಷಮೆ ಕೇಳಲು ಐ ಆಮ್ ಸಾರಿ ಎಂಬ 300 ಹೋರ್ಡಿಂಗ್ ಗಳನ್ನು ಹಾಕಿಸಿರುವ ಭೂಪ.  ತನ್ನ ಗರ್ಲ್ ಫ್ರೆಂಡ್ ನ್ನು ಶಿವ್ಡೇ ಎಂದು ಹೇಳಿದ್ದು, ಪಿಂಪಲ್ ಸೌದಾಗರ್ ಏರಿಯಾದ ಸ್ಕೈಲೇನ್ ನ್ನು ಕವರ್ ಮಾಡಲು ಈ ಹೋರ್ಡಿಂಗ್ ಗಳಿಗಾಗಿ 72,000 ರೂಪಾಯಿಗಳನ್ನು ಖರ್ಚು ಮಾಡಿದ್ದಾನಂತೆ ಈ ಪುಣ್ಯಾತ್ಮ. 
ಈ ಹೋರ್ಡಿಂಗ್ ಗಳನ್ನು ಗಮನಿಸಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಕ್ರಮವಾಗಿ ಹೋರ್ಡಿಂಗ್ ಹಾಕಿರುವ ಮಜ್ನು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಹಾಗೂ ತನ್ನ ಗರ್ಲ್ ಫ್ರೆಂಡ್ ನಡುವೆ ಯಾವುದೋ ಕಾರಣಕ್ಕಾಗಿ ಮನಸ್ತಾಪ ಉಂಟಾಗಿತ್ತು. ಆದ್ದರಿಂದ ಆಕೆ ಬಳಿ ಕ್ಷಮೆ ಕೇಳಲು ಆಕೆ ಇರುವ ಪ್ರದೇಶದಲ್ಲಿ ಈ ರೀತಿ ಹೋರ್ಡಿಂಗ್ಸ್ ಹಾಕಿಸಿರುವುದಾಗಿ ಖೇದ್ಕರ್ ಹೇಳಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.