ಮಹಾರಾಷ್ಟ್ರ: ವಾಜಪೇಯಿಗೆ ಗೌರವ ಸಲ್ಲಿಸಲು ನಕಾರ- ಎಐಎಂಐಎಂ ಕಾರ್ಪೊರೇಟರ್ ಬಂಧನ
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರಿಗೆ ಗೌರವ ಸಲ್ಲಿಸಲು ನಿರಾಕರಿಸಿದ ಎಐಎಂಐಎಂ ಕಾರ್ಪೊರೇಟರ್ ಸಯ್ಯದ್ ಮಾಚೀನ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.

Published On :
ಮಹಾರಾಷ್ಟ್ರ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರಿಗೆ ಗೌರವ ಸಲ್ಲಿಸಲು ನಿರಾಕರಿಸಿದ ಎಐಎಂಐಎಂ ಕಾರ್ಪೊರೇಟರ್ ಸಯ್ಯದ್ ಮಾಚೀನ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.
ಮಹಾರಾಷ್ಟ್ರದ ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗಷ್ಟೇ ವಿಧಿವಶರಾದ ಮಾಜಿ ಪ್ರಧಾನಿ ವಾಜಪೇಯಿಯವರಿಗೆ ಸಂತಾಪ ಸೂಚಿಸಲಾಗುತ್ತಿತ್ತು.
ಈ ವೇಳೆ ಸಭೆಯಲ್ಲಿ ಹಾಜರಿದ್ದ ಮಾಟೀನ್ ಅವರು ಇದಕ್ಕೆ ನಿರಾಕರಿಸಿದ್ದಾರೆ. ಪರಿಣಾಮ ಔರಂಗಾಬಾದ್ ಪೊಲೀಸರು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದ್ದು, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದ್ದಾರೆಂಬ ಆರೋಪದ ಮೇರೆಗೆ ಮಾಟೀನ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಇದಲ್ಲದೆ ಎಐಎಂಐಎಂ ಜಿಲ್ಲಾಧ್ಯಕ್ಷ ಜಾವೆದೇ ಖುರೇಷಿಯವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಪೊಲೀಸರಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ವಾಜಪೇಯಿಯವರಿಗೆ ಗೌರವ ಸಲ್ಲಿಸಲು ನಿರಾಕರಿಸಿದ ಮಾಟೀನ್ ಅವರಿಗೆ ಬಿಜೆಪಿ ಕೌನ್ಸಿಲರ್ ಗಳಾದ ಪ್ರಮೋದ್ ರಾಥೋಡ್, ವಿಜಯ್ ಉಡಾಡೆ, ರಾಜ್ ವಾಂಖೆಡೆ ಥಳಿಸಿದ್ದು, ಇವರ ವಿರುದ್ಧ ಕೂಡ ಪ್ರಕರಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arrestಮಹಾರಾಷ್ಟ್ರMaharashtraಬಂಧನTributeAtal Bihari Vajpayeeಅಟಲ್ ಬಿಹಾರಿ ವಾಜಪೇಯಿಗೌರವAIMIM corporatorಎಐಎಂಐಎಂ ಕಾರ್ಪೊರೇಟರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


