ಹರ್ಯಾಣ: ಪತಿಗೇ ತ್ರಿವಳಿ ತಲಾಖ್ ನೀಡಿದ ಪತ್ನಿ, ಸೋದರ ಸಂಬಂಧಿ ಜೊತೆ ಪರಾರಿ!
ಮುಸ್ಲಿಂ ಮಹಿಳೆಗೆ ಪತಿ ತಲಾಖ್ ಕೊಡುವ ಸುದ್ದಿ ಈ ವರೆಗೂ ಸಾಮಾನ್ಯವಾಗಿತ್ತು. ಆದರೆ ಹರ್ಯಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಪತ್ನಿಯೇ ಪತಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ವರದಿಯಾಗಿದೆ.

Published On :
ಹರ್ಯಾಣ: ಮುಸ್ಲಿಂ ಮಹಿಳೆಗೆ ಪತಿ ತಲಾಖ್ ಕೊಡುವ ಸುದ್ದಿ ಈ ವರೆಗೂ ಸಾಮಾನ್ಯವಾಗಿತ್ತು. ಆದರೆ ಹರ್ಯಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಪತ್ನಿಯೇ ಪತಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ವರದಿಯಾಗಿದೆ.
ಮೂವರು ಮಕ್ಕಳ ತಾಯಿಯಾಗಿರುವ ಶಾಝಿಯಾ, ಪತಿ ಅಬ್ಬಾಸ್ ಗೆ ತಲಾಖ್ ನೀಡಿದ್ದು, ತನ್ನ ಸೋದರ ಸಂಬಂಧಿಯೂ ಆಗಿರುವ ಪ್ರಿಒಯಕರನ ಜೊತೆಗೆ ಪರಾರಿಯಾಗಿದ್ದಾಳೆ. ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಕಳೆದ ವರ್ಷ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಕಾನೂನು ಬಾಹೀರ ಎಂದು ಹೇಳಿತ್ತು. ತ್ರಿವಳಿ ತಲಾಖ್ ನ್ನು ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು ರಾಜ್ಯಸಭೆಯಲ್ಲಿ ಇನ್ನಷ್ಟೇ ಅಂಗೀಕಾರವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


