ದೇಶ

'ಅಜಾತ ಶತ್ರು'ವಿಗೆ ವಿಶ್ವಾದ್ಯಂತ ಅಶ್ರುತರ್ಪಣ, ಅಂತಿಮ ದರ್ಶನಕ್ಕೆ ಆಗಮಿಸಿದ ಅಫ್ಘನ್ ಅಧ್ಯಕ್ಷ

ನಮ್ಮನ್ನಗಲಿದ ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಪಯಣ ನಡೆಯುತ್ತಿರುವಂತೆಯೇ ದೇಶಕಂಡ ಪ್ರಬುದ್ಧ ರಾಜಕಾರಣಿ ಮತ್ತು ಮಾನವತಾವಾದಿಗೆ ವಿಶ್ವಾದ್ಯಂತ ಅಶ್ರುತರ್ಪಣ ಸಲ್ಲಿಕೆ ಮಾಡಲಾಗಿದೆ.

'ಅಜಾತ ಶತ್ರು'ವಿಗೆ ವಿಶ್ವಾದ್ಯಂತ ಅಶ್ರುತರ್ಪಣ, ಅಂತಿಮ ದರ್ಶನಕ್ಕೆ ಆಗಮಿಸಿದ ಅಫ್ಘನ್ ಅಧ್ಯಕ್ಷ
ಅಜಾತ ಶತ್ರುವಿಗೆ ಅಶ್ರುತರ್ಪಣ
Published On :
ನವದೆಹಲಿ: ನಮ್ಮನ್ನಗಲಿದ ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಪಯಣ ನಡೆಯುತ್ತಿರುವಂತೆಯೇ ದೇಶಕಂಡ ಪ್ರಬುದ್ಧ ರಾಜಕಾರಣಿ ಮತ್ತು ಮಾನವತಾವಾದಿಗೆ ವಿಶ್ವಾದ್ಯಂತ ಅಶ್ರುತರ್ಪಣ ಸಲ್ಲಿಕೆ ಮಾಡಲಾಗಿದೆ.
ಇತ್ತ ದೆಹಲಿಯಲ್ಲಿರುವ ಬ್ರಿಟನ್ ರಾಯಭಾರ ಕಚೇರಿ ಅಧಿಕಾರಿಗಳು ಬ್ರಿಟನ್ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ವಾಜಪೇಯಿ ಅವರಿಗೆ ಗೌರವ ಸಲ್ಲಿಕೆ ಮಾಡಿದೆ. ಈ ಬಗ್ಗೆ ಮಾತನಾಡಿರಕುವ ದೆಹಲಿಯಲ್ಲಿರುವ ಬ್ರಿಟನ್ ರಾಯಭಾರಿ ಡೊಮಿನಿಕ್ ಅಸ್ಕ್ವಿತ್ ಅವರು, ನಿಜಕ್ಕೂ ವಾಜಪೇಯಿ ಅವರು ಅಗಾಧ ಮಾನವೀಯತೆ ಉಳ್ಳ ಪ್ರಮುಖ ವ್ಯಕ್ತಿ. ಅವರ ಸಾವು ನಮಗೆ ದೊಡ್ಡ ನಷ್ಟ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಇನ್ನು ವಾಜಪೇಯಿ ಅಗಲಿಕೆಗೆ ಸಂತಾಪ ಸೂಚಿಸಿರುವ ಮಾರಿಷಸ್‌ ತನ್ನ ಸರಕಾರೀ ಕಚೇರಿಗಳಲ್ಲಿ ತನ್ನ ರಾಷ್ಟ್ರಧ್ವಜವನ್ನು ಅರ್ಧ ಎತ್ತರದಲ್ಲಿ ಹಾರಾಟ ಮಾಡಿದೆ. ಈ  ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಅಂತೆಯೇ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ, ಬಾಂಗ್ಲಾದೇಶ ವಿದೇಶಾಂಗ ಸಚಿವರು ದೆಹಲಿಗೆ ಆಗಮಿಸಿದ್ದಾರೆ.
ಇನ್ನು ಕೆಲವೇ ಕ್ಷಣಗಳಲ್ಲಿ ವಾಜಪೇಯಿ ಅವರ ಅಂತ್ಯಕ್ರಿಯೆ ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.