ಯೋಗಿ ಆದಿತ್ಯನಾಥ್ ಜೀವನಚರಿತ್ರೆ ಅತ್ಯುತ್ತಮ ಮಾರಾಟ !
ಲಖನೌ ಟೈಮ್ಸ್ ಆಫ್ ಇಂಡಿಯಾ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ರಚಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಚರಿತ್ರೆ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುತ್ತಿದೆ.

ನವದೆಹಲಿ: ಲಖನೌ ಟೈಮ್ಸ್ ಆಫ್ ಇಂಡಿಯಾ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ರಚಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಚರಿತ್ರೆ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುತ್ತಿದೆ.
ಉತ್ತರ ಖಂಡ್ ರಾಜ್ಯದ ಹಳ್ಳಿಯೊಂದರಿಂದ ಗೋರಕ್ ನಾಥ್ ದೇವಾಲಯದವರೆಗಿನ ಅವರ ಸುಂದರ ಜೀವಣ ಪಯಣ , ಸಂಸತ್ತು, ಹಾಗೂ ಅಂತಿಮವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರ ಜೀವನ ಕುರಿತು ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.
' ದಿ ರೈಸ್ ಆಫ್ ಎ ಸ್ಯಾಪ್ರೋನ್ ಸೋಶಿಯಲಿಸ್ಟ್ ' ಈ ದಿನಗಳಲ್ಲಿ ಹಲವಾರು ರಾಜಕಾರಣಿಗಳು ಮತ್ತು ರಾಜಕೀಯ ಪತ್ರಕರ್ತರ ವಿಶೇಷ ಸಂಗ್ರಹಕ್ಕೆ ನಿಧಾನವಾಗಿ ಮತ್ತು ನಿಧಾನವಾಗಿ ದಾರಿ ಮಾಡಿಕೊಡುತ್ತಿದೆ. ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನ ಆರಂಭ ಹಾಗೂ ಜನರಿಗೆ ಎಷ್ಟೋ ಗೊತ್ತಿಲ್ಲದಂತಹ ಅನೇಕ ವಿಚಾರಗಳು ಈ ಪುಸ್ತಕದಲ್ಲಿದೆ.
ಇಂತಹ ಪುಸ್ತಕಗಳು ಸಾಮಾಜಿಕ , ರಾಜಕೀಯ ಮುಖಂಡರನ್ನು ಪ್ರೇರೆಪಿಸುತ್ತವೆ ಎಂದು ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಹೃದಯ್ ನಾರಾಯಣ್ ದೀಕ್ಷಿತ್ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಟೈಮ್ಸ್ ಸಮೂಹದಿಂದ ಈ ಪುಸ್ತಕ ಮುದ್ರಣಗೊಂಡಿದ್ದು, ಮೊದಲ ಕೃತಿಯನ್ನು ನವೆಂಬರ್ 24, 2017ರಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


