ಕರುಣಾನಿಧಿ ನಿಧನದ ವಿಚಾರದಲ್ಲಿ ರಜನಿಕಾಂತ್ ರಾಜಕೀಯ- ತಮಿಳುನಾಡು ಸಚಿವ
ಡಿಎಂಕೆ ವರಿಷ್ಠ ಕರುಣಾನಿಧಿ ನಿಧನದ ವಿಚಾರದಲ್ಲಿ ಸೂಪರ್ ಸ್ಟಾರ್ ಕಮ್ ರಾಜಕಾರಣಿ ರಜನಿಕಾಂತ್ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸಚಿವ ಡಿ. ಜಯ ಕುಮಾರ್ ಆರೋಪಿಸಿದ್ದಾರೆ.

ಚೆನ್ನೈ : ಡಿಎಂಕೆ ವರಿಷ್ಠ ಕರುಣಾನಿಧಿ ನಿಧನದ ವಿಚಾರದಲ್ಲಿ ಸೂಪರ್ ಸ್ಟಾರ್ ಕಮ್ ರಾಜಕಾರಣಿ ರಜನಿಕಾಂತ್ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸಚಿವ ಡಿ. ಜಯ ಕುಮಾರ್ ಆರೋಪಿಸಿದ್ದಾರೆ.
ರಜನಿಕಾಂತ್ ಅವರಿಗೆ ತಮಿಳುನಾಡು ರಾಜಕೀಯ ಗೊತ್ತಿಲ್ಲ. ಕರುಣಾನಿಧಿ ನಿಧನ ಕುರಿತಂತೆ ರಜನಿಕಾಂತ್ ಅವರ ಹೇಳಿಕೆ ಅಪಕ್ವತೆ ತೋರುತ್ತದೆ. ಅವರಿನ್ನೂ ರಾಜಕೀಯವಾಗಿ ಪಕ್ವಗೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.
ಕರುಣಾನಿಧಿ ಅವರ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಇ. ಕೆ. ಪಳನಿಸ್ವಾಮಿ ಸೇರಿದಂತೆ ಸಚಿವರೆಲ್ಲರೂ ಪಾಲ್ಗೊಳ್ಳಬೇಕಿತ್ತು ಎಂದು ರಜನಿಕಾಂತ್ ನೀಡಿದ ಹೇಳಿಕೆ ನಂತರ ಜಯಕುಮಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕರುಣಾನಿಧಿ ಅವರ ಅಂತ್ಯಸಂಸ್ಕಾರದ ವೇಳೆಯಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತರಿಂದ ಹಿಡಿದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವರೆಗೂ ದೇಶದ ಹಲವು ಕಡೆಗಳಿಂದ ಅನೇಕ ಮುಖಂಡರು ಭಾಗವಹಿಸಿದ್ದರು. ಆದರೆ, ತಮಿಳುನಾಡು ಮುಖ್ಯಮಂತ್ರಿ , ಸಂಪುಟ ಬಂದಿಲ್ಲವಲ್ಲ ಎಂದು ರಜನಿಕಾಂತ್ ಟೀಕಿಸಿದ್ದರು.
ಕರುಣಾನಿಧಿ ನಿಧನ ಹಿನ್ನೆಲೆಯಲ್ಲಿ ದಕ್ಷಿಣ ಭಾರತೀಯ ಕಲಾವಿದರ ಸಂಘ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ರಜನಿಕಾಂತ್, ಡಿಎಂಕೆ ಮೂಲಕ ಕರುಣಾನಿಧಿ ಅನೇಕ ಚುನಾವಣೆಗಳಲ್ಲಿ ಗೆದ್ದಿದ್ದಾರೆ , ಸೋತಿದ್ದಾರೆ. ವಿಶ್ವದ ಯಾವ ನಾಯಕರು ತಮಿಳುನಾಡುಗೆ ಭೇಟಿ ನೀಡಿದ್ದರೆ ಅವರು ಕರುಣಾನಿಧಿ ಅವರನ್ನು ಭೇಟಿ ಮಾಡುತ್ತಿದ್ದರು. ನಂತರ ಇಲ್ಲಿ ಯಾರನ್ನೂ ಭೇಟಿ ಮಾಡುತ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


