ದೇಶ

ಕೇರಳ ಚರ್ಚ್ ಲೈಂಗಿಕ ಕಿರುಕುಳ ಪ್ರಕರಣ: ಮತ್ತಿಬ್ಬರು ಪಾದ್ರಿಗಳು ಶರಣು

ಚರ್ಚ್ ಪಾದ್ರಿಗಳು ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತಿಬ್ಬರು ಪಾದ್ರಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಕೇರಳ ಚರ್ಚ್ ಲೈಂಗಿಕ ಕಿರುಕುಳ ಪ್ರಕರಣ: ಮತ್ತಿಬ್ಬರು ಪಾದ್ರಿಗಳು ಶರಣು
ಸಂಗ್ರಹ ಚಿತ್ರ
Published On :
ಕೊಟ್ಟಾಯಂ: ಚರ್ಚ್ ಪಾದ್ರಿಗಳು ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತಿಬ್ಬರು ಪಾದ್ರಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಲೈಂಗಿಕ ಕಿರುಕುಳ ವಿಚಾರವಾಗಿ ಕೇರಳದ ಕೊಟ್ಟಾಯಂ ಬಳಿಯ ಮಲಂಕ್ಕಾರಾ ಆರ್ಥಡಾಕ್ಸ್‌ ಚರ್ಚಿನ ಮತ್ತಿಬ್ಬರು ಪಾದ್ರಿಗಳು ಪೊಲೀಸರಿಗೆ ಶರಣಾಗಿದ್ದು, ಶರಣಾದ ಪಾದ್ರಿಗಳನ್ನು ಅಬ್ರಹಂ ವರ್ಗೀಸ್ ಹಾಗು ಜೈಸೆ ಕೆ ಜಾರ್ಜ್ ಎಂದು ಗುರುತಿಸಲಾಗಿದೆ. ಇಬ್ಬರೂ ಪಾದ್ರಿಗಳನ್ನು ಕೊಲ್ಲಂ ಕ್ರೈಂ ಬ್ರಾಂಚ್‌ ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ. 
ಇದೇ ಪ್ರಕರಣ ಸಂಬಂಧ  ಇನ್ನಿಬ್ಬರು ಆರೋಪಿ ಪಾದ್ರಿಗಳಾದ ಜಾನ್ಸನ್‌ ವಿ ಮ್ಯಾಥ್ಯೂ ಹಾಗೂ ಜಾಬ್‌ ಮ್ಯಾಥ್ಯೂರನ್ನು ಪೊಲೀಸರು ಬಂಧಿಸಿದ್ದರು.
ಏನಿದು ಪ್ರಕರಣ?
ಕೊಟ್ಟಾಯಂ ಬಳಿಯ ಮಲಂಕ್ಕಾರಾ ಆರ್ಥಡಾಕ್ಸ್‌ ಚರ್ಚನ ಪಾದ್ರಿಗಳು ವಿವಾಹಿತ ಮಹಿಳೆಯ ಜೀವನದ ಕೆಲ ರಹಸ್ಯಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡಿ, ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ನಾಲ್ವರು ಪಾದ್ರಿಗಳ ವಿಚಾರವಾಗಿ ಈ ಚರ್ಚ್‌ ಸಾಕಷ್ಟು ವಿವಾದಕ್ಕೆ ಈಡಾಗಿದೆ. ತನ್ನ ಬಳಿ ಸಾಕಷ್ಟು ಸಾಕ್ಷಿ ಇದೇ ಎಂದು ಹೇಳಿರುವ ಮಹಿಳೆಯ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.