ಅಕ್ರಮ ನುಸುಳುಕೋರರಿಂದ ದೇಶದಲ್ಲಿ ಕಾಶ್ಮೀರದಂತಹ ಮತ್ತಷ್ಟು ಸಮಸ್ಯೆಗಳು ಉದ್ಭವ: ಬಾಬಾ ರಾಮ್ ದೇವ್
ದೇಶದಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ನಿಯಂತ್ರಿಸದಿದ್ದರೆ ಮತ್ತೆ ಹತ್ತು ಕಾಶ್ನೀರದಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

Published On :
ನವದೆಹಲಿ: ದೇಶದಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ನಿಯಂತ್ರಿಸದಿದ್ದರೆ ಮತ್ತೆ ಹತ್ತು ಕಾಶ್ನೀರದಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಅಸ್ಸಾಂ ಎನ್ ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್ ದೇವ್ ಅವರು, ರಾಷ್ಟ್ರೀಯ ನಾಗರಿಕತ್ವ ನೋಂದಣಿ ವಿಚಾರ ಒಳ್ಳೆಯದೇ. ಖಂಡಿತವಾಗಿಯೂ ದೇಶದ ಅಕ್ರಮ ನುಸುಳುಕೋರರನ್ನು ನಿಗ್ರಹಿಸಬೇಕು. ಇಲ್ಲವಾದಲ್ಲಿ ಮತ್ತೆ ಹತ್ತು ಕಾಶ್ಮೀರದಂತಹ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.
ಒಂದು ಮೂಲದ ಪ್ರಕಾರ ಸುಮಾರು 3 ರಿಂದ 4 ಕೋಟಿ ಅಕ್ರಮ ನುಸುಳುಕೋರರು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ನಾವು ಇದನ್ನು ಕೂಡಲೇ ನಿಯಂತ್ರಸಿಬೇಕು. ಇಲ್ಲವಾದಲ್ಲಿ ಮತ್ತೆ 10 ಕಾಶ್ಮೀರ ದಂತಹ ಸಮಸ್ಯೆಗಳು ತಲೆ ಎತ್ತುತ್ತವೆ. ಅಕ್ರಮ ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡಬೇಕು. ಅಕ್ರಮ ನುಸುಳುಕೋರರಿಂದ ದೇಶಕ್ಕೆ ಗಂಭೀರ ಆತಂಕವಿದೆ ಎಂಬುದನ್ನು ಯಾರೂ ಮರೆಯಬಾರದು. ಅವರು ಪಾಕಿಸ್ತಾನಿಯರಾಗಿರಬಹುದು ಅಧವಾ ಬಾಂಗ್ಲಾದೇಶೀಯರು ಅಥವಾ ರೊಹಿಂಗ್ಯನ್ನರಾಗಿಬಹುದು. ಅಷ್ಟೇ ಅಕ್ರಮ ನುಸುಳುಕೋರರು ಅಮೆರಿಕನ್ನರೇ ಆಗಿದ್ದರೆ ಅವರನ್ನು ಗುರುತಿಸಿ ದೇಶದಿಂದ ಹೊರಗಟ್ಟಬೇಕು.
ಈಗಾಗಲೇ ಒಂದು ಕಾಶ್ಮೀರದಿಂದ ನಾವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಅಕ್ರಮ ನುಸುಳುಕೋರರನ್ನು ಹೀಗೆ ಬಿಟ್ಟರೆ ದೇಶದಲ್ಲಿ ಕಾಶ್ಮೀರದಂತಹ ಮತ್ತೆ 10 ಸಮಸ್ಯೆಗಳು ಎದುರಾಗುತ್ತವೆ ಎಂದು ಬಾಬಾ ರಾಮ್ ದೇವ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiBaba Ramdevಬಾಬಾ ರಾಮ್ ದೇವ್Illegal immigrantsAssam NRCಅಕ್ರಮ ನುಸುಳುಕೋರರುಅಸ್ಸಾಂ ಎನ್ಆರ್ ಸಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


